
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಈ ಸಂವಾದ ಕಾರ್ಯಕ್ರಮದಲ್ಲಿ ಈ ಬಾರಿ ಶಿಕ್ಷಕರು ಹಾಗೂ ಪೋಷಕರೂ ಕೂಡ ಭಾಗಿಯಾಗಬಹುದು. ಹೀಗಾಗಿ ಈ ವರ್ಷ 2.62 ಲಕ್ಷ ಶಿಕ್ಷಕರು ಹಾಗೂ 93 ಸಾವಿರ ಪೋಷಕರು ಸಂವಾದ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿದ್ದಾರೆ.
ಪರೀಕ್ಷಾ ಪೇ ಚರ್ಚಾ – 2021 ಆಯೋಜನೆಗೊಳ್ಳಲಿರುವ ತಾರೀಖನ್ನ ಇನ್ನೂ ಪ್ರಕಟಿಸಲಾಗಿಲ್ಲ. 2018ರಲ್ಲಿ ಆರಂಭವಾದ ಈ ಸಂವಾದ ಕಾರ್ಯಕ್ರಮ ಈ ಬಾರಿ 4ನೇ ಆವೃತ್ತಿಯನ್ನ ಪೂರೈಸಲಿದೆ.
ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲಿದ್ದಾರೆ. ತಮ್ಮಲ್ಲಿರುವ ಭಯ ಹಾಗೂ ಆತಂಕಗಳ ಬಗ್ಗೆ ವಿದ್ಯಾರ್ಥಿಗಳು ನೇರವಾಗಿ ಪ್ರಧಾನಿ ಮೋದಿ ಬಳಿ ಹೇಳಿಕೊಳ್ಳಬಹುದಾಗಿದೆ.
ಪರೀಕ್ಷಾ ಪೇ ಚರ್ಚಾ ನನ್ನ ಹೃದಯಕ್ಕೆ ಅತಿ ಹತ್ತಿರವಾದ ಕಾರ್ಯಕ್ರಮವಾಗಿದೆ. ಇದರಲ್ಲಿ ದೇಶದ ಸಾವಿರಕ್ಕೂ ಹೆಚ್ಚು ಶಾಲೆಯ ಮಕ್ಕಳು ಭಾಗಿಯಾಗ್ತಾರೆ. ದೇಶದ ಯುವ ಜನತೆ ಯಾವ ರೀತಿ ಯೋಚನೆ ಮಾಡ್ತಾರೆ ಹಾಗೂ ಅವರು ಏನಾಗಬೇಕೆಂದು ಬಯಸಿದ್ದಾರೆ ಅನ್ನೋದು ಈ ಕಾರ್ಯಕ್ರಮದ ಮೂಲಕ ನನಗೆ ತಿಳಿಯುತ್ತೆ ಅಂತಾ ಕಳೆದ ವರ್ಷ ಪ್ರಧಾನಿ ಮೋದಿ ಸಂವಾದದ ವೇಳೆ ಹೇಳಿದ್ದನ್ನ ನಾವಿಲ್ಲಿ ಸ್ಮರಿಸಬಹುದಾಗಿದೆ.