ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಪಂಡರಾಪುರದ ಶ್ರೀ ವಿಠಲ ದೇವಾಲಯವನ್ನು 7000 ಮಾವಿನ ಹಣ್ಣಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲಂಕಾರದ ವೈಭವದ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಪುಣೆ ಮೂಲದ ವಿನಾಯಕ ಕಚ್ಚಿ ಎಂಬ ಉದ್ಯಮಿ ಈ ಮಾವಿನಹಣ್ಣನ್ನು ದೇವಸ್ಥಾನಕ್ಕೆ ಅರ್ಪಿಸಿದ್ದರು. ದೇವಾಲಯದ ಆವರಣದ ಜೊತೆಗೆ ಭಗವಾನ್ ವಿಠಲ ಮತ್ತು ರುಕ್ಮಿಣಿಯ ಪ್ರತಿಮೆಗಳನ್ನೂ ಸಹ ಹಣ್ಣುಗಳಿಂದ ಅಲಂಕರಿಸಲಾಗಿತ್ತು.
ಒಂದೇ ಮಂಟಪದಲ್ಲಿ ಅಕ್ಕ-ತಂಗಿ ಮದುವೆಯಾದ ಭೂಪ
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಇಲ್ಲಿ ಅಲಂಕರಿಸಿದ ಎಲ್ಲಾ ಹಣ್ಣುಗಳನ್ನು ಕೋವಿಡ್‌ನಿಂದ ನಿಂದ ಬಳಲುತ್ತಿರುವ ರೋಗಿಗಳಿಗೆ ವಿತರಿಸಲು ದೇವಾಲಯ ಆಡಳಿತವು ನಿರ್ಧರಿಸಿದೆ.