ಕೊರೊನಾ ವೈರಸ್ ಸಮಯದಲ್ಲಿ ಆಸ್ಪತ್ರೆ ಬಿಲ್ ಗಳನ್ನು ನಗದು ರೂಪದಲ್ಲಿ ಪಾವತಿ ಮಾಡುವವರಿಗೊಂದು ಮಹತ್ವದ ಸುದ್ದಿಯಿದೆ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಲು ಸಾಧ್ಯವಿಲ್ಲ. ಆದಾಯ ತೆರಿಗೆ ಇಲಾಖೆ ಬುಧವಾರ ಈ ಬಗ್ಗೆ ಮಾಹಿತಿ ನೀಡಿದೆ. ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪಾದಲ್ಲಿ ಪಾವತಿಸಿದರೆ, ಕೆಲವು ಮಾಹಿತಿಗಳನ್ನು ನೀಡಬೇಕಾಗುತ್ತದೆ.
ಸಾಂಕ್ರಾಮಿಕ ರೋಗದ ಸಮಯದಲ್ಲಿ ರೋಗಿಗಳ ಅನುಕೂಲಕ್ಕಾಗಿ ಸಿಬಿಡಿಟಿ ಕೆಲಸ ಮಾಡಿದೆ ಎಂದು ಐಟಿ ಇಲಾಖೆ ಟ್ವಿಟರ್‌ನಲ್ಲಿ ಬರೆದಿದೆ. ಆದ್ದರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269 ಎಸ್‌ಟಿ ನಿಬಂಧನೆಯಿಂದ ವಿನಾಯಿತಿ ನೀಡಲಾಗಿದೆ. ರೋಗಿಗಳಿಗೆ ಕೋವಿಡ್ ಚಿಕಿತ್ಸೆಗಾಗಿ 2 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಪಾವತಿಗಳನ್ನು ಮಾಡುವಾಗ ಪಾನ್ ಅಥವಾ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ, ಕಳೆದ ವಾರ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ಮೇ 31 ರೊಳಗೆ ರೋಗಿಗಳು ಅಥವಾ ಅವರ ಸಂಬಂಧಿಕರಿಂದ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲು ಅವಕಾಶ ನೀಡಿತ್ತು. ಆದ್ರೆ ರೋಗಿ ಹಾಗೂ ಶುಲ್ಕ ಪಾವತಿಸುವ ವ್ಯಕ್ತಿಗಳಿಬ್ಬರ ಪಾನ್ ಅಥವಾ ಆಧಾರ್ ನೀಡಬೇಕು. ಇಬ್ಬರ ನಡುವಿನ ಸಂಬಂಧದ ಬಗ್ಗೆ ಹೇಳಬೇಕು.