ಪದೇಪದೆ ಭಾರತದ ತಾಳ್ಮೆ ಪರೀಕ್ಷೆ ಮಾಡುತ್ತಿರುವ ನೆರೆಯ ಪಾಕಿಸ್ತಾನ, ಇತ್ತೀಚೆಗೆ ತನ್ನ ಉಪಟಳ ಹೆಚ್ಚಿಸಿದೆ. ಗಡಿ ನಿಯಂತ್ರಣ ರೇಖೆ ಬಳಿ ಈ ವರ್ಷ ಪಾಕಿಸ್ತಾನ ಸೇನೆ ಹದಿನೇಳು ವರ್ಷಗಳ ಅವಧಿಯಲ್ಲೇ ಗರಿಷ್ಠ ಮಟ್ಟದ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಚೀನಾ ಕಿರಿಕಿರಿ ನಡುವೆ ನಿಯಂತ್ರಣ ರೇಖೆ (ಎಲ್‌ಒಸಿ) ಯಲ್ಲಿ ಪಾಕಿಸ್ತಾನವು ಜನವರಿಯಿಂದೀಚೆಗೆ ಜಮ್ಮು ಭಾಗದ ಎಲ್ಒಸಿಯಲ್ಲಿ ಪಾಕಿಸ್ಥಾನ 3,186 ಬಾರಿ ಕದನ ವಿರಾಮ ಉಲ್ಲಂಘಿಸಿದೆ. 242 ಕ್ರಾಸ್ ಬಾರ್ಡರ್ ಫೈರಿಂಗ್ ಘಟನೆಗಳೂ ಜಮ್ಮು ಭಾಗದ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಿಂದ ವರದಿಯಾಗಿದೆ.
ಸೈನ್ಯದ ದಾಖಲೆಗಳ ಪ್ರಕಾರ, ನಿಯಂತ್ರಣ ರೇಖೆಯ ಉದ್ದಕ್ಕೂ 2017ರಲ್ಲಿ 971 ಮತ್ತು 2018 ರಲ್ಲಿ 1,629 ಗಡಿ ಉಲ್ಲಂಘನೆ ಪ್ರಕರಣ ಆಗಿತ್ತು. 2019ರಲ್ಲಿ 3,168 ಕ್ಕೆ ತಲುಪಿದ್ದು, ಬಾಲಾಕೋಟ್ ವಾಯುದಾಳಿಯ ನಂತರ ಪ್ರಮುಖ ಸರ್ಜಿಕಲ್ ಸ್ಪೈಕ್‌ಗಳಲ್ಲದೇ ಆರ್ಟಿಕಲ್ 370 ಮತ್ತು ಜಮ್ಮು ಕಾಶ್ಮೀರ ವಿಭಜನೆ ಬಳಿಕ ಪಾಕ್ ಕಿರಿಕಿರಿ ಹೆಚ್ಚು ಮಾಡಿದೆ.