ಇಲ್ಲಿಯವರೆಗೆ ನೀವು ಹಲವಾರು ಬಜ್ಜಿಗಳ ಬಗ್ಗೆ ಕೇಳಿರಬಹುದು. ಆದರೆ ನಾವೀಗ ಹೇಳಲು ಹೊರಟಿರುವ ಬಜ್ಜಿಯ ಕಥೆ ಕೇಳಿ ಗಾಬರಿ ಬೀಳಬೇಡಿ.
ಹೌದು, ಅಷ್ಟಕ್ಕೂ ನಾವು ಹೇಳಲು ಹೊರಟಿರುವುದು ಒರಿಯೋ ಬಜ್ಜಿಯ ಕಥೆ. ಲಾಕ್ಡೌನ್ ಸಮಯದಲ್ಲಿ ಮಹಾನುಭಾವರೊಬ್ಬರು ಈ ಬಜ್ಜಿ ಅನ್ವೇಷಣೆ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಬಿಸ್ಕತ್ ನಲ್ಲಿ ಬಜ್ಜಿ ಮಾಡಿರುವ ವ್ಯಕ್ತಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ತರಹೇವಾರಿ ಆಹಾರಗಳಲ್ಲಿ ಇದೂ ಒಂದು ಎನ್ನಲಾಗುತ್ತಿದೆ.
ಇದೀಗ ಒರಿಯೋ ಬಜ್ಜಿಗೆ ಸಾಮಾಜಿಕ ಜಾಲತಾಣದಲ್ಲಿ ಪರ – ವಿರೋಧ ಚರ್ಚೆ ಆರಂಭವಾಗಿದ್ದು, ನೀವು ಬೇಕಾದರೆ ಮನೆಯಲ್ಲಿ ಪ್ರಯತ್ನಿಸಿ, ಹೇಗಿದೆ ಎಂದು ತಿಳಿದುಕೊಳ್ಳಿ.