ನವದೆಹಲಿ: ಕೊರೊನಾ ಆತಂಕದ ಹೊತ್ತಲ್ಲೇ ಸೇರಂ ಇನ್ ಸ್ಟಿಟ್ಯೂಟ್ ಸಿಹಿಸುದ್ದಿ ನೀಡಿದೆ. ಭಾರತದಲ್ಲಿ ಔಷಧವನ್ನು 225 ರೂಪಾಯಿಗೆ ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೇರಂ ಇನ್ ಸ್ಟಿಟ್ಯೂಟ್ ಔಷಧವನ್ನು ಉತ್ಪಾದನೆ ಮಾಡುತ್ತಿದ್ದು ದೇಶದ ಬಡವರಿಗೂ ಔಷಧ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಔಷಧವನ್ನು ಸೇರಂ ಇನ್ ಸ್ಟಿಟ್ಯೂಟ್ ತಯಾರಿಸುತ್ತಿದ್ದು ಔಷಧ ಉತ್ಪಾದನೆಗಾಗಿ ಬಿಲ್ ಗೇಟ್ಸ್ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 100 ಮಿಲಿಯನ್ ಡೋಸೇಜ್ ಔಷಧ ತಯಾರಿಸಲಾಗುತ್ತಿದ್ದು ವಿಶ್ವದ 92 ದೇಶಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ.