ಕೊರೊನಾ ಎರಡನೆ ಅಲೆಯ ಆರ್ಭಟದಿಂದಾಗಿ ದೇಶದಲ್ಲಿ ಒಟ್ಟು 420 ವೈದ್ಯರು ಈವರೆಗೆ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಶನಿವಾರ ಆಘಾತಕಾರಿ ಮಾಹಿತಿಯೊಂದನ್ನ ನೀಡಿದೆ.
ಭಾರತೀಯ ವೈದ್ಯಕೀಯ ಸಂಘ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ದೆಹಲಿಯೊಂದರಲ್ಲೇ 100 ಮಂದಿ ವೈದ್ಯರು ಕೋವಿಡ್ಗೆ ಬಲಿಯಾಗಿದ್ದಾರೆ. ದೆಹಲಿ ದೇಶದಲ್ಲೇ ಅತೀ ಹೆಚ್ಚು ವೈದ್ಯರ ಸಾವನ್ನ ಕಂಡ ರಾಜ್ಯವಾಗಿದೆ. ಎರಡನೆ ಸ್ಥಾನದಲ್ಲಿ ಬಿಹಾರ ರಾಜ್ಯವಿದ್ದು ಇಲ್ಲಿ 96 ಮಂದಿ ವೈದ್ಯರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ 41 ಮಂದಿ ವೈದ್ಯರು ಸಾವಿಗೀಡಾಗಿದ್ದಾರೆ. ಅದೇ ರೀತಿ ಗುಜರಾತ್ನಲ್ಲಿ 31 ಮಂದಿ ವೈದ್ಯರು ಜೀವತೆತ್ತಿದ್ದಾರೆ. ಮಹಾರಾಷ್ಟ್ರ ಕೊರೊನಾ ಎರಡನೆ ಅಲೆಯಲ್ಲಿ 15 ವೈದ್ಯರನ್ನ ಕಳೆದುಕೊಂಡಿದೆ.
ರಾಜ್ಯ ಸಾವಿನ ಸಂಖ್ಯೆ
ಆಂಧ್ರ ಪ್ರದೇಶ 26
ಆಸ್ಸಾಂ 03
ಬಿಹಾರ 96
ಛತ್ತೀಸಗಢ 03
ದೆಹಲಿ 100
ಗುಜರಾತ್ 31
ಗೋವಾ 02
ಹರಿಯಾಣ 02
ಜಮ್ಮು ಮತ್ತು ಕಾಶ್ಮೀರ 03
ಕರ್ನಾಟಕ 08
ಕೇರಳ 4
ಮಧ್ಯಪ್ರದೇಶ 13
ಮಹಾರಾಷ್ಟ್ರ 15
ಒಡಿಶಾ 16
ಪಾಂಡಿಚೆರಿ 1
ಪಂಜಾಬ್ 1
ತಮಿಳುನಾಡು 14
ತೆಲಂಗಾಣ 20
ತ್ರಿಪುರ 2
ಉತ್ತರ ಪ್ರದೇಶ 41
ಉತ್ತರಾಖಂಡ 2
ಪಶ್ಚಿಮ ಬಂಗಾಳ 16
ಇತರೆ 1
ಭಾರತೀಯ ವೈದ್ಯಕೀಯ ಸಂಘ ನೀಡಿರುವ ದಾಖಲೆಗಳ ಪ್ರಕಾರ ಕೊರೊನಾ ಮೊದಲ ಅಲೆಯಲ್ಲಿ 747 ವೈದ್ಯರು ಸಾವನ್ನಪ್ಪಿದ್ದರು. ಇದರಲ್ಲಿ 91 ವೈದ್ಯರು ತಮಿಳುನಾಡಿನವರಾಗಿದ್ದರೆ, ಮಹಾರಾಷ್ಟ್ರದಲ್ಲಿ 81 ಮಂದಿ ವೈದ್ಯರು ಸಾವನ್ನಪ್ಪಿದ್ದರು.
ಪಶ್ಚಿಮ ಬಂಗಾಳದಲ್ಲಿ ಹಾಗೂ ಆಂಧ್ರ ಪ್ರದೇಶದಲ್ಲಿ ತಲಾ 70, ಆಸ್ಸಾಂನಲ್ಲಿ 20, ಬಿಹಾರದಲ್ಲಿ 38, ಚಂಡೀಗಢ ಹಾಗೂ ಚತ್ತೀಸಗಢದಲ್ಲಿ ತಲಾ 8, ಗೋವಾ, ಮಣಿಪುರ ಹಾಗೂ ಜಮ್ಮು& ಕಾಶ್ಮೀರದಲ್ಲಿ ತಲಾ 3, ಗುಜರಾತ್ನಲ್ಲಿ 62, ದೆಹಲಿಯಲ್ಲಿ 23, ಕರ್ನಾಟಕದಲ್ಲಿ 68, ಹಿಮಾಚಲ ಪ್ರದೇಶದಲ್ಲಿ 2, ಜಾರ್ಖಂಡ್ನಲ್ಲಿ 19, ಕೇರಳದಲ್ಲಿ 4, ಮಧ್ಯ ಪ್ರದೇಶದಲ್ಲಿ22, ಮೇಘಾಲಯ ಹಾಗೂ ತ್ರಿಪುರಾದಲ್ಲಿ ತಲಾ 1, ಪಾಂಡಿಚೆರಿಯಲ್ಲಿ 2, ಓಡಿಶಾ ಹಾಗೂ ಹರಿಯಾಣದಲ್ಲಿ ತಲಾ 14, ಪಂಜಾಬ್ನಲ್ಲಿ 20, ರಾಜಸ್ಥಾನದಲ್ಲಿ 17, ತೆಲಂಗಾಣದಲ್ಲಿ 12, ಉತ್ತರಾಖಂಡ್ನಲ್ಲಿ 5 ಹಾಗೂ ಉತ್ತರ ಪ್ರದೇಶದಲ್ಲಿ 65 ಮಂದಿ ವೈದ್ಯರು ಸಾವಿಗೀಡಾಗಿದ್ದರು.