alex Certify ಕೆಂಪು ಕೋಟೆ ಸಮೀಪ ನಡೆದ ಹಿಂಸಾಚಾರ: 300 ಕ್ಕೂ ಅಧಿಕ ಪೊಲೀಸರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಕೋಟೆ ಸಮೀಪ ನಡೆದ ಹಿಂಸಾಚಾರ: 300 ಕ್ಕೂ ಅಧಿಕ ಪೊಲೀಸರಿಗೆ ಗಾಯ

ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್​ ರ್ಯ್ಯಾಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 22 ಪ್ರಕರಣಗಳನ್ನ ದಾಖಲಿಸಿದ್ದಾರೆ. ಸೆಪ್ಟೆಂಬರ್​ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ನಿನ್ನೆ ಟ್ರ್ಯಾಕ್ಟರ್​ ರಾಲಿ ಹಮ್ಮಿಕೊಂಡಿದ್ದರು. ಆದರೆ ಇದು ಹಿಂಸಾಚಾರಕ್ಕೆ ತಿರುಗಿತ್ತು.

ಮುಕರ್ಬಾ ಚೌಕ್​, ಗಾಜಿಪುರ, ಐಟಿಓ, ಸೀಮಾಪುರಿ, ನಂಗ್ಲೋಯಿ ಟಿ ಪಾಯಿಂಟ್​, ಟಿಕ್ರಿ ಗಡಿ ಹಾಗೂ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣನಾದ ದೀಪ್‌ ಸಿಧು ಹಿನ್ನಲೆ ಏನು…? ಇಲ್ಲಿದೆ ಮಾಹಿತಿ

ಗಾಜಿಪುರ , ಟಿಕ್ರಿ ಹಾಗೂ ಸಿಂಗು ಗಡಿಗಳಲ್ಲಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್​ಗಳನ್ನೇ ಪ್ರತಿಭಟನಾಕಾರರು ಮುರಿದು ಹಾಕಿದ್ದಾರೆ. ಹಾಗೂ 8 ಬಸ್​ಗಳು ಮತ್ತು 17 ಖಾಸಗಿ ವಾಹನಗಳನ್ನ ಧ್ವಂಸ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೃಷಿ ಮಸೂದೆಯನ್ನ ವಿರೋಧಿಸಿ ಕಳೆದ 2 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಸಂಯುಕ್ತ ಕಿಸಾನ್​ ಮೋರ್ಚಾ ಸಂಘದ ಸದಸ್ಯರು ಜನವರಿ 26ರಂದು ಕೆಂಪುಕೋಟೆ ಎದುರು ಟ್ರ್ಯಾಕ್ಟರ್​ ರ್ಯಾಲಿ ನಡೆಸಲು ಪೊಲೀಸರ ಅನುಮತಿ ಕೇಳಿದ್ದರು. ಶಾಂತಿಯುತ ಆಂದೋಲನ ಸೇರಿದಂತೆ ವಿವಿಧ ಷರತ್ತುಗಳನ್ನ ವಿಧಿಸಿ ಅನುಮತಿ ನೀಡಲಾಗಿತ್ತು.

ಆದರೆ ಅನುಮತಿ ನೀಡಿದ ಸಮಯಕ್ಕಿಂತ ಮೊದಲೇ ಆಗಮಿಸಿದ ಪ್ರತಿಭಟನಾಕಾರರು ಕೆಂಪು ಕೋಟೆಯಲ್ಲಿ ಸಿಖ್​ ಧ್ವಜವನ್ನ ಹಾರಿಸಿದ್ದು ಮಾತ್ರವಲ್ಲದೇ ಹಿಂಸಾಚಾರ ನಡೆಸಿದ್ದಾರೆ. ಆದರೆ ಈ ಹಿಂಸಾಚಾರಕ್ಕೂ ನಮಗೂ ಸಂಬಂಧವಿಲ್ಲವೆಂದು ಕೃಷಿ ಸಂಘಟನೆಗಳು ಸ್ಪಷ್ಟನೆ ನೀಡಿವೆ.

ಬೆಳಗ್ಗೆ 8.30ರ ಸುಮಾರಿಗೆ 6000ದಿಂದ 7000 ಟ್ರ್ಯಾಕ್ಟರ್​ಗಳು ಸಿಂಗು ಗಡಿಯಲ್ಲಿ ಒಟ್ಟುಗೂಡಿದ್ದವು ಹಾಗೂ ಕುದುರೆಗಳ ಮೇಲೆ ಹತ್ತಿದ ಪ್ರತಿಭಟನಾಕಾರರು ಮಾರಕ ಆಯುಧಗಳನ್ನ ಹಿಡಿದು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...