ಮಹಿಳೆಯರು ಯಾವ ಪುರುಷನಿಗೂ ಕಡಿಮೆ ಇಲ್ಲ ಅನ್ನೋದನ್ನು ತೋರಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಇದ್ದಾರೆ. ಎಲ್ಲಾ ಕಡೆ ಪುರುಷರಂತೆಯೇ ಸಾಮರ್ಥ್ಯ ತೋರಿಸುತ್ತಾ ಕೆಲಸ ಮಾಡುತ್ತಿದ್ದಾರೆ ಅನ್ನೋದು ಗೊತ್ತಿರುವ ವಿಚಾರ. ಯಾವುದೇ ಕ್ಷೇತ್ರಕ್ಕೋದರೂ ಮಹಿಳೆಯರ ಪಾಲು ಇದ್ದೇ ಇದೆ. ಇದೀಗ ಮತ್ತೊಂದು ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ.
ಹೌದು, ವಿಪತ್ತು ನಿರ್ವಹಣೆಯಲ್ಲಿಯೂ ಮಹಿಳೆಯರು ಸಾಧನೆ ತೋರಿಸುತ್ತಿದ್ದಾರೆ. ಎನ್.ಡಿ.ಆರ್.ಎಫ್. ಕ್ಷೇತ್ರಕ್ಕೆ ಮಹಿಳೆಯರು ಸೇರುವ ಮೂಲಕ ಹೊಸ ಇತಿಹಾಸ ಬರೆಯುತ್ತಿದ್ದಾರೆ. 100 ಕ್ಕೂ ಹೆಚ್ಚು ಮಹಿಳೆಯರು ಎನ್ ಡಿ ಆರ್ ಎಫ್ ನಲ್ಲಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ. ಇಷ್ಟು ದಿನ ಪುರುಷರೇ ಎನ್ ಡಿ ಆರ್ ಎಫ್ ನಲ್ಲಿ ಇದ್ದರು. ಆದರೆ ಇದೀಗ ಮಹಿಳೆಯರು ಸೇರ್ಪಡೆಯಾಗಿದ್ದಾರೆ.
ಇನ್ನು ಎನ್ ಡಿ ಆರ್ ಎಫ್ ಗೆ ಸೇರ್ಪಡೆಯಾದ ಮಹಿಳೆಯರನ್ನು ಉತ್ತರ ಪ್ರದೇಶದ ಗಢ ಮುಕ್ತೇಶ್ವರ ಪಟ್ಟಣದ ಗಂಗಾ ನದಿ ತಟದಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಎನ್ ಡಿ ಆರ್ ಎಫ್ ನ ಮಹಾ ನಿರ್ದೇಶಕ ಪ್ರಧಾನ್ ಹೇಳಿದ್ದಾರೆ. ಅದೇನೆ ಇರಲಿ ಎಲ್ಲಾ ಕ್ಷೇತ್ರಗಳಂತೆ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿಯೂ ಮಹಿಳೆಯರು ಸೇರಿದ್ದು ಹೆಮ್ಮೆಯ ಸಂಗತಿ.