ದೆಹಲಿ ಗಡಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಯಲ್ಲಿ ನಿರತರಾದ ರೈತರಿಗಾಗಿ 25 ಮುಸ್ಲಿಂ ಯುವಕರ ತಂಡ ಸಾಮೂಹಿಕ ಅಡುಗೆ ವ್ಯವಸ್ಥೆ ಮಾಡಿದೆ.
ಸಮುದಾಯ ಅಡುಗೆಯ ನೇತೃತ್ವ ವಹಿಸಿರುವ ಪಂಜಾಬ್ ಮುಸ್ಲಿಂ ಫೆಡರೇಷನ್ ತಂಡವು, ಸಮುದಾಯ ಅಡುಗೆ ಮೂಲಕ ರೈತರ ಸೇವೆ ಸಲ್ಲಿಸಲು ಸಿಂಘು ಗಡಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಈ ಪ್ರತಿಭಟನೆ ಅಂತ್ಯ ಕಾಣುವವರೆಗೂ ರೈತರಿಗಾಗಿ ನಮ್ಮ ಸೇವೆ ಮುಂದುವರಿಯಲಿದೆ. ರೈತರು ನಮಗಾಗಿ ಸೇವೆ ಮಾಡ್ತಾರೆ. ಈಗ ಪರವಾಗಿ ಕೆಲಸ ಮಾಡೋದು ನಮ್ಮ ಗುರಿ. ಹೀಗಾಗಿ 25 ಸದಸ್ಯರುಳ್ಳ ನಮ್ಮ ತಂಡ ಪ್ರತಿಭಟನಾ ನಿರತ ರೈತರಿಗೆ ಆಹಾರದ ವ್ಯವಸ್ಥೆ ಮಾಡಿದೆ ಅಂತಾ ಹೇಳಿದ್ರು.