alex Certify ʼಗೋ ಕೊರೊನಾ ಕೊರೊನಾ ಗೋʼ ಬಳಿಕ ಈಗ ʼನೋ ಕೊರೊನಾ ಕೊರೊನಾ ನೋʼ ಟ್ರೆಂಡ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೋ ಕೊರೊನಾ ಕೊರೊನಾ ಗೋʼ ಬಳಿಕ ಈಗ ʼನೋ ಕೊರೊನಾ ಕೊರೊನಾ ನೋʼ ಟ್ರೆಂಡ್​..!

ಕೊರೊನಾ ವಿಶ್ವಕ್ಕೆ ಅಪ್ಪಳಿಸಿದ ವೇಳೆ ಕೇಂದ್ರ ಸಚಿವ ರಾಮದಾಸ್​ ಅಥವಾಳೆ ಗೋ ಕೊರೊನಾ ಕೊರೊನಾ ಗೋ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇನ್ನೂ ಗೋ ಕೊರೊನಾ ಗೋ ಟ್ರೆಂಡ್​ ಇರುವಾಗಲೇ ಇದೀಗ ರಾಮದಾಸ್​ ಹೊಸದೊಂದು ಕೊರೊನಾ ಘೋಷಣೆ ಮೂಲಕ ಸುದ್ದಿಯಾಗ್ತಿದ್ದಾರೆ.

ಕೇಂದ್ರ ಸಚಿವ ರಾಮದಾಸ್​ರ ಹೊಸ ಕೊರೊನಾ ಘೋಷಣೆ ʼನೋ ಕೊರೊನಾ ಕೊರೊನಾ ನೋʼ ಎಂದಾಗಿದೆ. ತಮ್ಮ ಹೊಸ ಘೋಷಣೆ ಕುರಿತು ಮಾತನಾಡಿದ ಅವ್ರು, ನಾನು ಮೊದಲು ʼಗೋ ಕೊರೊನಾ ಕೊರೊನಾ ಗೋʼ ಎಂದು ಹೇಳಿದ್ದೆ. ಇದೀಗ ಬ್ರಿಟನ್​ನಲ್ಲಿ ರೂಪಾಂತರಿ ಕೊರೊನಾ ವೈರಸ್ ಹುಟ್ಟಿಕೊಂಡಿದೆ. ಹೀಗಾಗಿ ನಾನು ʼನೋ ಕೊರೊನಾ ನೋʼ ಎಂಬ ಘೋಷಣೆ ನೀಡುತ್ತಿದ್ದೇನೆ ಎಂದು ಹೇಳಿದ್ರು.

ʼಗೋ ಕೊರೊನಾ ಗೋʼ ಘೋಷಣೆಯಂತೆಯೇ ʼನೋ ಕೊರೊನಾ ಕೊರೊನಾ ನೋʼ ಎಂಬ ಘೋಷಣೆ ಕೂಡ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಅಥಾವಾಳೆ ಈ ಹೊಸ ಘೋಷಣೆಯನ್ನೂ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...