ರೈತರನ್ನ ಬಳಸಿಕೊಂಡು ವಿರೋಧ ಪಕ್ಷದವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನ ಪಡ್ತಿದ್ದಾರೆ ಎಂದು ಹೇಳಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೇಶದಲ್ಲಿ ರೈತ ಪ್ರತಿಭಟನೆ ನಡೆಯುವುದರಲ್ಲಿ ರಾಮ ಮಂದಿರ ನಿರ್ಮಾಣದ ವಿರೋಧಿಗಳೇ ಕಾರಣ ಎಂಬ ಹೊಸ ಆರೋಪವನ್ನ ಮಾಡಿದ್ದಾರೆ.
ಒಂದೇ ಭಾರತ, ಶ್ರೇಷ್ಟ ಭಾರತ ಸಹಿಸದವರು ಸೇರಿ ಈ ಪ್ರತಿಭಟನೆ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನ ಸಹಿಸದ ಪ್ರತಿಪಕ್ಷದವರು ರೈತರನ್ನ ತಪ್ಪು ದಾರಿಗೆ ಎಳೆಯುವ ಮೂಲಕ ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಅಂತಾ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಕೃಷಿ ಕಾರ್ಯಕ್ರಮದಲ್ಲಿ ಗುಡುಗಿದ್ರು.