ಚೆನ್ನೈ: ವಿದೇಶಗಳಿಂದ ಚಿನ್ನ ಸಾಗಿಸಲು ಚಿತ್ರ, ವಿಚಿತ್ರ ವಿಧಾನ ಅನುಸರಿಸುತ್ತಿದ್ದಾರೆ. ಚಪ್ಪಲಿಯಲ್ಲಿ ಹಾಳೆಯಾಗಿ, ಬ್ಯಾಗ್ ಕವರ್ ಆಗಿ ಹೀಗೆ..ಇತ್ತೀಚೆಗೆ ಹೊಸ ವಿಧಾನ ಹೆಚ್ಚುತ್ತಿದೆ. ಗುದ ನಾಳದಲ್ಲಿ ಚಿನ್ನದ ಪೇಸ್ಟ್ ಇಟ್ಟುಕೊಂಡು ಸಾಗಿಸುತ್ತಿದ್ದ ವ್ಯಕ್ತಿಯನ್ನು ಚೆನ್ನೈ ನಲ್ಲಿ ಬಂಧಿಸಲಾಗಿದೆ.
ದುಬೈನಿಂದ ಚಿನ್ನ ತಂದಿದ್ದ ಸಯ್ಯದ್ ಮೊಹಮದ್ ಬುಹಾರಿ ಎಂಬುವವನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಆತನಿಂದ 44.4 ಲಕ್ಷ ಮೌಲ್ಯದ 842 ಗ್ರಾಂ. 24 ಕ್ಯಾರೆಟ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ದುಬೈ ವಿಮಾನ FZ -8517 ವಿಮಾನದಲ್ಲಿ ಬಂದಿಳಿದ ಬುಹಾರಿಯನ್ನು ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ಆತ ಇಡಬಾರದ ಜಾಗದಲ್ಲಿ ಎರಡು ಚಿನ್ನದ ಪೇಸ್ಟ್ ಇಟ್ಟುಕೊಂಡಿರುವುದು ಬಯಲಾಗಿದೆ. ಅಲ್ಲದೆ, ಆತನಿಂದ 25.5 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.