ಸೀರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯನ್ನು ಅಸುರಕ್ಷಿತ ಎಂದು ಘೋಷಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ಮಾಡಿದ ಮದ್ರಾಸ್ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೊಟೀಸ್ ಕಳುಹಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಕೋವಿಡ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸ್ವಯಂ ಪ್ರೇರಣೆಯಿಂದ ಭಾಗಿಯಾಗಿದ್ದ ಚೆನ್ನೈ ಮೂಲದ 41 ವರ್ಷದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಲಸಿಕೆಯ ಪ್ರಯೋಗದಿಂದ ತಮ್ಮಲ್ಲಿನ ’ಕ್ರಿಯಾಶೀಲತೆಯೇ ಇಲ್ಲದಂತಾಗಿ ಬ್ಯುಸಿನೆಸ್‌ಗೆ ತೊಂದರೆಯಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ ಗೆ KSRTC ಬಸ್ ಡಿಕ್ಕಿ –ಅಪಾಯದಿಂದ ಪಾರು
ಕೋವಿಶೀಲ್ಡ್ ಅಸುರಕ್ಷಿತವೆಂದಿರುವ ಈ ವ್ಯಕ್ತಿ, ಸೀರಂನಿಂದ 5 ಕೋಟಿ ರೂ.ಗಳ ಪರಿಹಾರ ಕೋರಿದ್ದಾರೆ.
ಈ ಸಂಬಂಧ ಮಾತನಾಡಿದ ಅರ್ಜಿದಾರರ ಪತ್ನಿ, “ನನ್ನ ಪತಿಗೆ ಲಸಿಕೆಯಿಂದಾಗಿ ಕ್ರಿಯಾಶೀಲತೆ ಇಲ್ಲವಾಗಿದ್ದು, ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ನಮ್ಮ ಗುರಿ ಪರಿಹಾರ ಪಡೆಯುವುದಲ್ಲ. ಸಾರ್ವಜನಿಕರಿಗೆ ಸತ್ಯಾಂಶ ತಿಳಿಸುವುದು” ಎಂದಿದ್ದಾರೆ.
ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕನಾದ ಪುಣೆ ಮೂಲದ ಸೀರಂ ಇಂಡಿಯಾ, ಆಕ್ಸ್‌ಫರ್ಡ್ ವಿವಿ ಹಾಗೂ ಬ್ರಿಟೀಷ್-ಸ್ವೀಡಿಶ್ ಫಾರ್ಮಾ ದಿಗ್ಗಜ ಅಸ್ಟ್ರಾಝೆಂಕಾ ಜೊತೆಗೂಡಿ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿಪಡಿಸಿದೆ. ಭಾರತದ ಮದ್ದು ನಿಯಂತ್ರಣ ಪ್ರಾಧಿಕಾರ (ಡಿಜಿಸಿಐ) ಅನುಮೋದಿಸಿದ ಎರಡು ಕೋವಿಡ್ ಲಸಿಕೆಗಳಲ್ಲಿ ಕೋವಿಶೀಲ್ಡ್ ಸಹ ಒಂದಾಗಿದೆ. ಜನವರಿ 16ರಿಂದ ಇದುವರೆಗೂ ದೇಶದ ನಾನಾ ಮೂಲೆಗಳ ಒಂದು ಕೋಟಿಗೂ ಹೆಚ್ಚು ಮಂದಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಗಿದೆ.