ಅದೇ ಮೊದಲ ಬಾರಿಗೆ ವನ್ಯಜೀವಿ ಛಾಯಾಗ್ರಾಹಣ ಮಾಡಲು ಹೊರಟಿದ್ದ ಛಾಯಾಗ್ರಾಹಕರೊಬ್ಬರಿಗೆ ಲೈಫ್ ಟೈಂ ಮಟ್ಟಿಗಿನ ಅವಿಸ್ಮರಣೀಯ ದೃಶ್ಯವೊಂದನ್ನು ಸೆರೆ ಹಿಡಿಯುವ ಭಾಗ್ಯ ಸಿಕ್ಕಿದೆ.
ಪುಣೆ ಮೂಲದ ಛಾಯಾಗ್ರಾಹಕ ಅಭಿಷೇಕ್ ಪಗ್ನಿಸ್ ಮಹಾರಾಷ್ಟ್ರದ ತಡೋಬಾ ಅಂಧಾರೀ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕರಿ ಗಂಡು ಚಿರತೆಯೊಂದು ಅವರ ಲೆನ್ಸ್‌ನಲ್ಲಿ ಸೆರೆಯಾಗಿದೆ. ತಮ್ಮಿಂದ ಕೇವಲ 20 ಅಡಿ ದೂರದಲ್ಲಿ ಇದ್ದ ಆ ಚಿರತೆಯನ್ನು ಸರಿಯಾಗಿ ಕಣ್ಣು ತುಂಬಿಕೊಳ್ಳಲು ಅವರಿಗೆ 2.5 ಗಂಟೆಗಳು ತಗುಲಿದವು…!
ಸಂಜೆ 5 ಗಂಟೆ ವೇಳೆಗೆ ಪೊದೆಗಳ ಹಿಂದೆ ನಿಂತುಕೊಂಡು ನೀರು ಕುಡಿಯುತ್ತಿದ್ದ ವೇಳೆ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಪಗ್ನಿಸ್‌ರ ಈ ಛಾಯಾಚಿತ್ರ ಕೂಡಲೇ ವೈರಲ್ ಆಗಿದ್ದು, ವೈಲ್ಡ್ ಇಂಡಿಯಾ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಸಹ ಶೇರ್ ಮಾಡಿಕೊಂಡಿವೆ.