ನವದೆಹಲಿ: ಕೊರೊನಾ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲು ಬದಲಿ ಮಾರ್ಗದ ಅಧ್ಯಯನ ನಡೆಸಲಾಗಿದೆ.
ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲಿಗೆ ಬಾಯಲ್ಲಿ ಮುಕ್ಕಳಿಸಿದ ನೀರು ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಕೊರೊನಾ ಪತ್ತೆಹಚ್ಚಲು ಐಸಿಎಂಆರ್ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ.
ಮನೆಗಳಲ್ಲಿ ವ್ಯಕ್ತಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸುವ ಬದಲಿ ವ್ಯವಸ್ಥೆಗಳ ಕುರಿತಾಗಿ ಅಧ್ಯಯನ ನಡೆಸಲಾಗಿದೆ. ಬಾಯಲ್ಲಿನ ಮುಕ್ಕಳಿಸಿದ ನೀರಿನ ಮೂಲಕ ಪರೀಕ್ಷೆ ನಡೆಸುವುದರಿಂದ ಆರೋಗ್ಯ ಸಿಬ್ಬಂದಿಯ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಸಿಬ್ಬಂದಿಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ.
ಅಲ್ಲದೇ ಶೇಕಡ 70 ರಷ್ಟು ಜನ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿ ಬೇರೆ ರೀತಿಯಲ್ಲಿ ಪರೀಕ್ಷೆ ನಡೆಸಲು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಯಿ ಮುಕ್ಕಳಿಸಿದ ನೀರಿನ ಮೂಲಕ ಕೊರೊನಾ ಪತ್ತೆಹಚ್ಚುವ ಸಾಧ್ಯತೆಗಳ ಕುರಿತಾಗಿ ಐಸಿಎಂಆರ್ ವಿಜ್ಞಾನಿಗಳು ಅಧ್ಯಯನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.