
ತಿರುವನಂತಪುರಂನಲ್ಲಿ ಪ್ರಚಾರ ಸಭೆ ನಡೆಸಿದ ರಾಹುಲ್ ಗಾಂಧಿ ಆಟೋ ರಿಕ್ಷಾ ಏರಿ ಗಮನ ಸೆಳೆದ್ರು. ನೆಮೊಮ್ ಕ್ಷೇತ್ರದಲ್ಲಿ ಎಲ್ಡಿಎಫ್, ಯುಡಿಎಫ್ ಹಾಗೂ ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ. ನೆಮೊಮ್ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ರಾಹುಲ್ ಗಾಂಧಿ ತಾವು ಆಟೋರಿಕ್ಷಾದ ಮೇಲೆ ಬಂದಿರೋದಾಗಿ ಹೇಳಿದ್ರು.
ರಾಹುಲ್ ಗಾಂಧಿ ಬಳಿ ಕಷ್ಟ ತೋಡಿಕೊಂಡ ಆಟೋ ಚಾಲಕ, ಸಂಪಾದನೆಯೆಲ್ಲ ಪೆಟ್ರೋಲ್ ಖರ್ಚಿಗೆ ಆಗುತ್ತಿರೋದ್ರಿಂದ ಜೀವನ ನಡೆಸೋದು ತುಂಬಾನೇ ಕಷ್ಟವಾಗಿದೆ ಅಂತಾ ಹೇಳಿದ್ದಾನೆ.
ಬಿಜೆಪಿ ನಿರಂತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನ ಏರಿಕೆ ಮಾಡುತ್ತಲೇ ಇದ್ದು ಈ ಹಣವನ್ನೆಲ್ಲ ತನ್ನ ಸ್ನೇಹಿತರಿಗೆ ನೀಡುತ್ತಿದೆ. ಅವರಿಗೆ ಜನರ ಬಳಿಕ ಬಂದು ಮತ ಕೇಳೋಕೆ ಧೈರ್ಯವಾದರೂ ಹೇಗೆ ಬರುತ್ತೆ ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ.