ಇಂದೋರ್ ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೆಲಸ ಮಾಡುತ್ತಿದ್ದ 32 ವರ್ಷದ ವಾಸ್ತುಶಿಲ್ಪಿ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೇನು 4 ದಿನ ಇದೆ ಅನ್ನೋವಾಗಲೇ ರಸ್ತೆ ಅಪಘಾತವೊಂದರಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸಿದ್ಧಾರ್ಥ್ ಸೋನಿ ರಸ್ತೆ ಅಪಘಾತದಲ್ಲಿ ಸಾವೀಗಿಡಾದ ವ್ಯಕ್ತಿ. ಪಲಾಸಿಯಾ ಪ್ರದೇಶದ ಬಳಿ ಕಾರಿನಲ್ಲಿ ತೆರಳುತ್ತಿದ್ದ ಸಿದ್ಧಾರ್ಥ್ ಅಕಸ್ಮಾತ್ ಆಗಿ ವಿಕಾಸ್ ಯಾದವ್ ಎಂಬವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ.
ತಕ್ಷಣ ಕಾರಿನಿಂದ ಇಳಿದ ಸಿದ್ಧಾರ್ಥ್ ವಿಕಾಸ್ ಬಳಿ ಕ್ಷಮೆಯಾಚಿಸಿದ್ದಾರೆ. ಆದರೆ ವಿಕಾಸ್ ಏಕಾಏಕಿ ಸಿದ್ಧಾರ್ಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಿದ್ಧಾರ್ಥ್ರನ್ನ ವಿಕಾಸ್ ರಸ್ತೆ ಬದಿಗೆ ತಳ್ಳಿದ್ದಾರೆ. ಆದರೆ ಹಿಂಬಂಧಿಯಿಂದ ಬರುತ್ತಿದ್ದ ಲಾರಿಯ ಚಕ್ರದಡಿಯಲ್ಲಿ ಸಿದ್ಧಾರ್ಥ್ ಸಿಲುಕಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಟ್ರಕ್ ಸ್ಥಳದಿಂದ ತೆರಳುತ್ತಿದ್ದಂತೆಯೇ ವಿಕಾಸ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಅಪಘಾತದ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಪೊಲೀಸರು ಲಾರಿ ಚಾಲಕ ಹಾಗೂ ವಿಕಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
https://twitter.com/i/status/1339869863016218624