ಇತ್ತೀಚೆಗೆ ಸರಗಳವು, ದರೋಡೆ ಮತ್ತಿತರ ಕೃತ್ಯಗಳು ಹಾಡಹಗಲೇ ನಡೆಯುತ್ತಿದ್ದು, ಪುರುಷರು, ಸ್ತ್ರೀಯರು ಒಂಟಿಯಾಗಿ ಓಡಾಡುವುದೇ ಕಷ್ಟ ಎನ್ನುವಂತಾಗಿದೆ. ಆದರೆ, ಇಂತಹ ಸನ್ನಿವೇಶಗಳನ್ನು ಎದುರಿಸುವ ಧೈರ್ಯ ತೋರಲೇಬೇಕಾಗುತ್ತದೆ. ಆತ್ಮರಕ್ಷಣೆಗಾಗಿ ಹೋರಾಡಲೇಬೇಕಾಗುತ್ತದೆ.
ಪಂಜಾಬ್ ನ ಈ ಯುವತಿಗೆ ಅಂತಹುದೇ ಸಂದಿಗ್ಧ ಸ್ಥಿತಿ ಎದುರಾಗಿತ್ತು. ಅದನ್ನು ಆಕೆ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ನಿಭಾಯಿಸುವ ಮೂಲಕ ಸಾಹಸ ಮೆರೆದಿದ್ದಾಳೆ. ಒಬ್ಬಂಟಿಯಾಗಿ ನಡೆದುಹೋಗುತ್ತಿದ್ದ ಯುವತಿಯನ್ನು ಒಂದೇ ಬೈಕ್ ನಲ್ಲಿ ಮೂವರು ಹಿಂಬಾಲಿಸಿಕೊಂಡು ಬರುತ್ತಾರೆ. ಹತ್ತಿರಕ್ಕೆ ಬಂದು ಆಕೆಯ ಕೈಯಲ್ಲಿದ್ದ ಬ್ಯಾಗ್ ಕದ್ದು ಪರಾರಿಯಾಗಲು ಯತ್ನಿಸುತ್ತಾರೆ.
ತಕ್ಷಣ ಬುದ್ಧಿ ಉಪಯೋಗಿಸಿದ ಯುವತಿ, ಹಿಂಬದಿ ಸವಾರನ ಅಂಗಿ ಹಿಡಿದೆಳೆದು ಸಿನಿಮೀಯ ರೀತಿಯಲ್ಲಿ ಕೆಳಗುರುಳಿಸಿ ಬೀಳಿಸಿದ್ದಾಳೆ. ತಕ್ಷಣ ಸಹಾಯಕ್ಕಾಗಿ ಕೂಗಾಡಿದ್ದು, ಬೈಕ್ ನಲ್ಲಿದ್ದವರು ಹೆದರಿ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದವನಿಂದ ಬ್ಯಾಗ್ ಪಡೆದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.