ಗುಜರಾತ್ ನ ಭಾವನಗರದಲ್ಲಿ ಭೋರ್ಗರೆದು ಹರಿಯುತ್ತಿದ್ದ ನದಿ ದಾಟಲು ಹೋದಾತ ಅದೃಷ್ಟವಶಾತ್ ಬಚಾವ್ ಆಗಿದ್ದಾನೆ.
ಚಂಡಮಾರುತದ ಪರಿಣಾಮದಿಂದ ಭಾರೀ ಮಳೆಯಾಗಿದ್ದು, ಕೆಲವೆಡೆ ಅಪಾಯದ ಮಟ್ಟ ಮೀರಿ ನದಿಗಳು ತುಂಬಿ ಹರಿಯುತ್ತಿವೆ.
ಪ್ರವಾಹೋಪಾದಿಯಲ್ಲಿ ಹರಿಯುತ್ತಿದ್ದ ಹೊಳೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಅವಕಾಶ ಇಲ್ಲವಾಗಿತ್ತು.
ಆದರೆ, ಈ ಭೂಪ ಬೈಕ್ ನಲ್ಲಿ ಆಚೆ ದಡಕ್ಕೆ ಹೋಗುವ ದುಸ್ಸಾಹಸಕ್ಕೆ ಕೈ ಹಾಕಿದ್ದು, ಹರಿಯುತ್ತಿದ್ದ ನೀರಿನಲ್ಲಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಲು ಹೊರಟಿದ್ದಾನೆ.
ಅಷ್ಟರಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ. ಅಲ್ಲೇ ಇದ್ದ ಸ್ಥಳೀಯರು ತಕ್ಷಣ ದೌಡಾಯಿಸಿ ರಕ್ಷಿಸಿದ್ದಾರೆ. ಈ ದುಸ್ಸಾಹಸ ಹಾಗೂ ರಕ್ಷಣಾ ಕಾರ್ಯದ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.