
ಕರೋನಾ ಲಾಕ್‌ಡೌನ್ ಪ್ರತಿಯೊಬ್ಬರಿಗೂ ಒಂದೊಂದು ಪಾಠ ಕಲಿಸಿದೆ. ಅದರಲ್ಲಿ ಪ್ರಮುಖವಾಗಿ ಟೈಂಪಾಸ್ ಮಾಡುವುದು ಹಾಗೂ ಅಕ್ಕಪಕ್ಕದವರೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವ ಬಗ್ಗೆ ಹೇಳಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ.
ಹೌದು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದಲ್ಲಾ ಕ್ವಾರಂಟೈನ್ ಕೇಂದ್ರದ ವಿಡಿಯೊವೊಂದನ್ಜು ಶೇರ್ ಮಾಡಿದ್ದಾರೆ. ಅದರಲ್ಲಿ ಕ್ವಾರಂಟೈನ್‌ನಲ್ಲಿರುವವರು ಗುಂಪಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಸಮಯವನ್ನು ಕಳೆಯಲು ಇರುವ ಜಾಗದಲ್ಲಿಯೇ ಆಡುವ ಮೂಲಕ ಬೇಸರವನ್ನು ಹೋಗಲಾಡಿಸಿಕೊಳ್ಳುತ್ತಿದ್ದಾರೆ.
ಈ ವಿಡಿಯೊ ಇದೀಗ ವೈರಲ್ ಆಗಿದ್ದು, ಭಾರತೀಯರು ಎಲ್ಲಿದ್ದರೂ ಅಲ್ಲಿಯೇ ಖುಷಿಯಿಂದ ಇರಲು ಪ್ರಯತ್ನಿಸುತ್ತಾರೆ ಎಂದರೆ, ಇನ್ನೊಬ್ಬರು ಕ್ರಿಕೆಟ್ ಆಡಲು ಒಳ್ಳೆಯ ಸಮಯವೆಂದು ಅಭಿಪ್ರಾಯಪಟ್ಟಿದ್ದಾರೆ.