alex Certify ʼಕೊರೊನಾʼ ಓಡಿಸಲು ಮಂತ್ರ ಪಠಿಸಿದ ಭೂಪ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಓಡಿಸಲು ಮಂತ್ರ ಪಠಿಸಿದ ಭೂಪ…..!

ಕಳೆದ ವರ್ಷ ಕೇಂದ್ರ ಸಚಿವ ರಾಮದಾಸ್​ ಅಥವಾಲೆ ʼಗೋ ಕೊರೊನಾ ಗೋʼ ಎಂದು ಹೇಳಿದ ಬಳಿಕ ಈ ಮಾತು ಇಂಟರ್ನೆಟ್​ ಸಖತ್​ ಹವಾ ಎಬ್ಬಿಸಿತ್ತು.

ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಇದರಲ್ಲಿ ಪುರೋಹಿತನೊಬ್ಬ ಕೋವಿಡ್​ 19ನ್ನು ಓಡಿಸಲು ʼಓಂ ಕೊರೊನಾ ಭಾಗ್​ ಸ್ವಾಹಾʼ ಎಂಬ ಮಂತ್ರವನ್ನ ಪಠಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಪುರೋಹಿತ ʼಓಂ ಕೊರೊನಾ ಕೊರೊನಾ ಕೊರೊನಾ ಭಾಗ್​ ಬಾಗ್​ ಭಾಗ್​ ಭಾಗ್​ ಭಾಗ್​ ಸ್ವಾಹʼ ಎಂದು ಹೇಳಿಕೆ ಬಳಿಕ ಅಗ್ನಿಗೆ ಆಹುತಿಗಳನ್ನ ಸಮರ್ಪಿಸ್ತಾ ಇರೋದನ್ನ ಕಾಣಬಹುದಾಗಿದೆ.

ಈ ವಿಡಿಯೋವನ್ನ ಫೋಟೋಗ್ರಾಫರ್​ ವಾರಿಂದರ್​ ಚಾವ್ಲಾ ಎಂಬವರು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಈ ವಿಡಿಯೋ ಸಖತ್​ ವೈರಲ್​ ಆಗಿದ್ದು ನೆಟ್ಟಿಗರು ತರಹೇವಾರಿ ಕಮೆಂಟ್​ಗಳನ್ನ ಹಾಕುತ್ತಿದ್ದಾರೆ. ಒಬ್ಬರು ಕೊರೊನಾ ಓಡಿ ಹೋಯ್ತು ಎಂದು ಹೇಳಿದ್ರೆ ಇನ್ನೊಬ್ಬರು ಕೊರೊನಾ ನಿನಗೆ ನಾಚಿಕೆ ಇಲ್ಲವಾ ಎಂದು ಬರೆದಿದ್ದಾರೆ.

https://www.instagram.com/p/CPBARo3gGEL/?utm_source=ig_embed&utm_campaign=loading

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...