ದೇಶಾದ್ಯಂತ ಅನೇಕ ಪೊಲೀಸ್ ಇಲಾಖೆಗಳು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ.
ಎವರ್‌ಗ್ರೀನ್ ಸೂಪರ್‌ಹಿಟ್ ’ಶೋಲೆ’ ಚಿತ್ರದ ಗಬ್ಬರ್ ಸಿಂಗ್ ಪಾತ್ರ ಇರುವ ಸೀನ್ ಒಂದನ್ನು ಬಳಸಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಕೋವಿಡ್-19 ಬಗ್ಗೆ ಜಾಗೃತಿಯಿಂದ ಇರುವಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದರಿಂದ ಯಾರು ಬೇಕಾದರೂ ಕೋವಿಡ್-19ಗೆ ತುತ್ತಾಗಬಹುದು ಎಂಬ ಸಂದೇಶ ರವಾನೆ ಮಾಡಿರುವ ಉತ್ತರ ಪ್ರದೇಶ ಪೊಲೀಸರು, “ಈ ದೃಶ್ಯದಲ್ಲಿ ಗಬ್ಬರ್‌ಗೆ ಏಕೆ ಶಿಕ್ಷೆ ಕೊಡಲಾಗುತ್ತಿದೆ?” ಎಂದು ಪೋಸ್ಟ್‌ನಲ್ಲಿ ಪ್ರಶ್ನೆ ಕೇಳಿದ್ದಾರೆ.
https://twitter.com/Uppolice/status/1351898897111683072?ref_src=twsrc%5Etfw%7Ctwcamp%5Etweetembed%7Ctwterm%5E1351898897111683072%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fup-police-uses-iconic-sholay-scene-to-dissuade-people-from-spitting-in-public%2F710177