ಮಹಿಳಾ ಸಬಲೀಕರಣಕ್ಕೆ ಒಡಿಶಾ ಸರ್ಕಾರದಿಂದ ಮಹತ್ವದ ಹೆಜ್ಜೆ 03-12-2020 6:39AM IST / No Comments / Posted In: Latest News, India ಮಹಿಳಾ ಸಬಲೀಕರಣಕ್ಕೆ ಮುಂದಾಗಿರುವ ಓಡಿಶಾದ ಕೋಟ್ಪ್ಯಾಡ್ ಎನ್ಎಸಿ ಮಹಿಳೆಯರಿಗೆಂದೇ ಹೊಸ ಉದ್ಯೋಗವನ್ನ ನೀಡಿದೆ. ಪಟ್ಟಣದ 4500ಕ್ಕೂ ಹೆಚ್ಚು ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಬ್ಯಾಟರಿ ಚಾಲಿತ ವಾಹನಗಳನ್ನ ನಿರ್ಮಿಸಲಾಗಿದೆ. ಹಾಗೂ ಇದನ್ನ ಚಲಾಯಿಸಲು ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಅಂತಾ ವಸತಿ ಹಾಗೂ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ ಹೊಸ ಉದ್ಯೋಗವನ್ನ ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಪಟ್ಟಣವನ್ನ ಸ್ವಚ್ಚವಾಗಿಡೋದು ಕೂಡ ಈ ಯೋಜನೆಯ ಉದ್ದೇಶವಾಗಿದೆ ಅಂತಾ ಸಚಿವಾಲಯ ಟ್ವೀಟ್ ಮಾಡಿದೆ. ಲಾಕ್ಡೌನ್ ಸಮಯದಲ್ಲಿ ಉದ್ಯೋಗ ಪರಿಸ್ಥಿತಿ ದೇಶದ ಇತರೆ ಭಾಗಗಳಲ್ಲಿ ಇರುವಂತೆ ಓಡಿಶಾದ ಕೊರಪುಟ್ ಜಿಲ್ಲೆಯಲ್ಲೂ ಹದಗೆಟ್ಟಿದೆ. ಅಂದಾಜಿನ ಪ್ರಕಾರ ಓಡಿಶಾದಲ್ಲಿ 2.5 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. Women empowerment in a unique way. @SwachhBharatGov @SwachSurvekshan @MoHUA_India @MoHFW_INDIA https://t.co/Ytd9cthgQP — GreenCleanIndia (@WeCare_GCI) December 1, 2020