ತನ್ನ ಮಗಳ ಆನ್ಲೈನ್ ಕ್ಲಾಸ್ ಗೆ ನೆರವಾಗುವ ಸಲುವಾಗಿ ಸ್ಮಾರ್ಟ್ ಫೋನ್ ಖರೀದಿ ಮಾಡಲು ಒಡಿಶಾದ ಭುವನೇಶ್ವರದ ಮಹಿಳೆಯೊಬ್ಬರು ತಮ್ಮ ಕಿವಿ ಓಲೆಗಳನ್ನು ಮಾರಿದ್ದಾರೆ.
ದಿ ಟೆಲಿಗ್ರಾಫ್‌ನಲ್ಲಿ ಬಂದ ವರದಿಯಂತೆ, ಮೇಸನ್ ಗಗನಗ ಭೋಯ್ ಹಾಗೂ ಅವರ ಪತ್ನಿ ರೀಟಾಗೆ 13 ವರ್ಷದ ಮಗಳು ಅರ್ಚಿತಾಳನ್ನು ಆನ್ಲೈನ್ ಕ್ಲಾಸ್‌ನಲ್ಲಿ ಭಾಗಿಯಾಗುವಂತೆ ಮಾಡಬೇಕಾಗಿತ್ತು. 8ನೇ ತರಗತಿಯಲ್ಲಿ ಓದುತ್ತಿರುವ ಅರ್ಚಿತಾ, ಕೊರೊನಾ ಕಾರಣದಿಂದ ಮನೆಯಿಂದಲೇ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಬೇಕಾಗಿ ಬಂದಿದ್ದು, ಆಕೆಯ ಬಳಿ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಸಾಕಷ್ಟು ಹಣ ಇರಲಿಲ್ಲ.
ಮದುವೆ ಸಮಯದಲ್ಲಿ ತಮ್ಮ ಹೆತ್ತವರಿಂದ ಪಡೆದುಕೊಂಡಿದ್ದ ಚಿನ್ನದ ಓಲೆಯನ್ನೇ ಬಹಳ ದಿಟ್ಟ ನಿರ್ಧಾರ ತೆಗೆದುಕೊಂಡು ರೀಟಾ ಅಡವಿಟ್ಟಿದ್ದಾರೆ. ಓಲೆಗಿಂತ ತಮ್ಮ ಮಗಳ ಭವಿಷ್ಯ ಮುಖ್ಯವೆಂದು ರೀಟಾ ತಿಳಿಸಿದ್ದಾರೆ.