alex Certify ಎರಡು ತಲೆ ಮೂರು ಕೈಗಳ್ಳುಳ್ಳ ಸಯಾಮಿ ಶಿಶು ಜನನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಲೆ ಮೂರು ಕೈಗಳ್ಳುಳ್ಳ ಸಯಾಮಿ ಶಿಶು ಜನನ…!

ಗರ್ಭಿಣಿಯೊಬ್ಬರು ಎರಡು ತಲೆ ಹಾಗೂ ಮೂರು ಕೈಗಳನ್ನ ಹೊಂದಿರುವ ಸಯಾಮಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಓಡಿಶಾದ ಕೆಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಅಪರೂಪದ ಸಯಾಮಿ ಶಿಶುಗಳು ಒಂದೇ ಎದೆ ಹಾಗೂ ಹೊಟ್ಟೆಯನ್ನ ಹೊಂದಿವೆ. ಈ ಸಯಾಮಿ ಮಕ್ಕಳ ಪೋಷಕರು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಮಕ್ಕಳ ತಾಯಿ ಕೆಲ ವರ್ಷಗಳ ಹಿಂದೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು.

ಸಯಾಮಿ ಶಿಶುಗಳ ಜನನವಾಗೋದು ತುಂಬಾನೇ ಅಪರೂಪ. ತಾಯಿಯ ಗರ್ಭದಲ್ಲಿ ಭ್ರೂಣದ ಬೆಳವಣಿಗೆ ಸರಿಯಾಗಿ ಆಗದೇ ಇದ್ದಲ್ಲಿ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.

ಮಿಲಿಯನ್​ ಜನಸಂಖ್ಯೆಯಲ್ಲಿ ಒಂದು ಶಿಶು ಈ ರೀತಿ ಜನಿಸಬಹುದು ಎಂದು ಕೇಂದ್ರಾಪುರ ಜಿಲ್ಲಾಸ್ಪತ್ರೆಯ ಹೆರಿಗೆ ತಜ್ಞ ದೇಬಾಶಿಶ್​ ಸಾಹೋ ಹೇಳಿದ್ದಾರೆ.

ಈ ಮಗುವು ಎರಡು ಬಾಯಿಯಲ್ಲಿ ಆಹಾರ ಸೇವಿಸುತ್ತೆ ಹಾಗೂ ಎರಡು ಮೂಗುಗಳಿಂದ ಉಸಿರಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ರಾಜೇಂದ್ರ ಏರಿಯಾದ ಕನಿ ಗ್ರಾಮದ ಉಮಾಕಂತ್​ ಪರಿದಾ ಪತ್ನಿ ಅಂಬಿಕಾ ಸಿ ಸೆಕ್ಷನ್​ ಮೂಲಕ ಈ ಸಯಾಮಿ ಶಿಶುಗಳಿಗೆ ಜನ್ಮ ನೀಡಿದ್ದರು.

ಈ ಸಯಾಮಿ ಅವಳಿ ಶಿಶುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ಕಟಕ್​​ನ ಸರ್ದಾರ್​ ವಲ್ಲಭಭಾಯ್​ ಪಟೇಲ್​ ಆಸ್ಪತ್ರೆಗೆ ಸೇರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...