ಆಯಸ್ಸು ಗಟ್ಟಿಯಿದ್ರೆ ಎಂಥ ಯುದ್ಧವನ್ನಾದ್ರೂ ಗೆದ್ದು ಬರಬಹುದು. ಕೊರೊನಾ ಕೂಡ ಇದಕ್ಕೆ ಉತ್ತಮ ನಿದರ್ಶನ. ಕೊರೊನಾ ಸಾಂಕ್ರಾಮಿಕ ರೋಗವನ್ನು 100 ರ ವೃದ್ಧರು ಗೆದ್ದು ಬಂದಿದ್ದಾರೆ. ಕೊರೊನಾ ಬಂದಾಗ ಆತ್ಮಸ್ಥೈರ್ಯ ಬಹಳ ಮುಖ್ಯ. ಆದ್ರೆ ಈ ಪ್ರಪಂಚದ ಬಗ್ಗೆ ಅರಿವಿಲ್ಲದ ಕಂದಮ್ಮ ಕೂಡ ಕೊರೊನಾ ಯುದ್ಧ ಗೆದ್ದಿದೆ.
ಒಡಿಶಾದ ಭುವನೇಶ್ವರದಲ್ಲಿ 1 ತಿಂಗಳ ಮಗು ಕೊರೊನಾದಿಂದ ಚೇತರಿಸಿಕೊಂಡಿದೆ. 10 ದಿನಗಳ ಕಾಲ ಐಸಿಯುವಿನಲ್ಲಿದ್ದ ಮಗು ಈಗ ಕೊರೊನಾದಿಂದ ಗುಣಮುಖವಾಗ್ತಿದೆ. ಇದನ್ನು ವೈದ್ಯರು ಪವಾಡವೆಂದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅಲ್ಲಿನ ವೈದ್ಯ ಡಾ. ಅರಿಜಿತ್ ಮೊಹಾಪಾತ್ರಾ, 10 ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಇದು ಪವಾಡಕ್ಕಿಂತ ಕಡಿಮೆಯಿಲ್ಲ ಎಂದಿದ್ದಾರೆ.
ಏಪ್ರಿಲ್ 5ರಂದು ನೆಹರೂ ನಗರದ ಯಶೋದ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಹೆರಿಗೆ ನಂತ್ರ ಮಗುವನ್ನು ಮನೆಗೆ ಕಳುಹಿಸಲಾಗಿತ್ತು. ಆದ್ರೆ 8 ದಿನಗಳ ನಂತ್ರ ಅಜ್ಜಿ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ವೇಳೆ ಮಗುವಿಗೆ ಕೊರೊನಾ ಇರುವುದು ಪತ್ತೆಯಾಗಿದೆ.