ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು ಸಾಕಷ್ಟು ವೈರಲ್ ಸಹ ಆಗಿವೆ.
ಒಡಿಶಾದ ಭುವನೇಶ್ವರ ಆಟೋ ಚಾಲಕರೊಬ್ಬರು ತಮ್ಮ ವಾಹನವನ್ನು ಮಿನಿ ಉದ್ಯಾನವನ್ನಾಗಿ ಮಾಡಿದ್ದಾರೆ. ಸಸಿಗಳು, ಅಕ್ವೇರಿಯಮ್, ಪಕ್ಷಿಗಳು ಹಾಗೂ ಮೊಲಗಳ ಪಂಜರವನ್ನು ಇಟ್ಟಿರುವ ಸುಜಿತ್ ದಿಗಲ್, ತಮ್ಮ ಊರಾದ ಕಂಧಮಲ್‌ನ ಮಿನಿ ಚಿತ್ರಣವೊಂದನ್ನು ತಮ್ಮ ಆಟೋರಿಕ್ಷಾದಲ್ಲಿ ಸೃಷ್ಟಿ ಮಾಡಿರುವುದಾಗಿ ತಿಳಿಸಿದ್ದಾರೆ.
ಬೇಕಂದಾಗ ತಮ್ಮ ಊರಿಗೆ ಹೋಗಲು ಸಾಧ್ಯವಾಗದೇ ಇರುವ ಕಾರಣ, ಸುಜಿತ್ ತಮ್ಮ ಆಟೋರಿಕ್ಷಾವನ್ನೇ ಪುಟ್ಟ ಗ್ರಾಮವನ್ನಾಗಿ ಮಾಡಿಕೊಂಡಿದ್ದಾರೆ.
https://twitter.com/IndianPandaa/status/1315780116832632832?ref_src=twsrc%5Etfw%7Ctwcamp%5Etweetembed%7Ctwterm%5E1315780116832632832%7Ctwgr%5Eshare_3%2Ccontainerclick_0&ref_url=https%3A%2F%2Fwww.news18.com%2Fnews%2Fbuzz%2Fodisha-man-turns-his-auto-rickshaw-into-a-memory-of-his-village-with-grass-birds-and-fish-2963363.html