alex Certify ಕೊರೊನಾ ಸಂಕಷ್ಟ: ಕುಟುಂಬ ನಿರ್ವಹಣೆಗಾಗಿ ಜೊಮ್ಯಾಟೋ ಡೆಲಿವರಿ ಪಾರ್ಟ್ನರ್​ ಆದ ವಿದ್ಯಾರ್ಥಿನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟ: ಕುಟುಂಬ ನಿರ್ವಹಣೆಗಾಗಿ ಜೊಮ್ಯಾಟೋ ಡೆಲಿವರಿ ಪಾರ್ಟ್ನರ್​ ಆದ ವಿದ್ಯಾರ್ಥಿನಿ..!

ಕೋವಿಡ್​ 19ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಲಾಕ್​ಡೌನ್​ ಆದೇಶಗಳಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದು ಪರಿಣಾಮವಾಗಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದೇ ರೀತಿ ಕಳೆದೊಂದು ವರ್ಷದಿಂದ ಆದಾಯದ ಮೂಲವಿಲ್ಲದೇ ಕಂಗೆಟ್ಟಿದ್ದ ಓಡಿಶಾ ಮೂಲದ ಕುಟುಂಬವೊಂದರಲ್ಲಿ ಯುವತಿಯೊಬ್ಬಳು ಜೊಮೆಟೋ ಡೆಲಿವರಿ ಪಾರ್ಟ್ನರ್​ ಆಗಿ ಕೆಲಸಕ್ಕೆ ಸೇರಿದ್ದು, ಈ ಮೂಲಕ ತನ್ನ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ ಹಣ ಹೊಂದಿಸುತ್ತಿದ್ದಾಳೆ.

ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ​ ತಂದೆ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ವಿಷ್ಣುಪ್ರಿಯಾ ತಂದೆ ಕೆಲಸ ಕಳೆದುಕೊಳ್ಳಬೇಕಾಗಿ ಬಂತು. ಒಪ್ಪೊತ್ತಿನ ಊಟಕ್ಕೂ ಕಷ್ಟ ಉಂಟಾದ ಸಂದರ್ಭದಲ್ಲಿ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯವಳಾದ ವಿಷ್ಣುಪ್ರಿಯಾ ಜೊಮ್ಯಾಟೋದಲ್ಲಿ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ.

ನಾನು ಮಕ್ಕಳಿಗೆ ಟ್ಯೂಷನ್​ ಮಾಡಿ ಹಣವನ್ನ ಸಂಪಾದಿಸುತ್ತಿದ್ದೆ. ಆದರೆ ಕೊರೊನಾದಿಂದಾಗಿ ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಾಗಿ ನಾನು ಜೊಮ್ಯಾಟೋದಲ್ಲಿ ಕೆಲಸಕ್ಕೆ ಸೇರಿದ್ದೇನೆ. ಆನ್​ಲೈನ್​ ತರಗತಿಗಳ ಜೊತೆಯಲ್ಲಿ ಈ ಕೆಲಸವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಇದ್ದೇನೆ ಎಂದು ವಿಷ್ಣುಪ್ರಿಯಾ ಹೇಳಿದ್ದಾಳೆ.

— ANI (@ANI) June 10, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...