
ಟ್ವಿಟರ್ನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೊ ಶೇರ್ ಮಾಡಿದ ಸಿಎಂ ನವೀನ್ ಪಟ್ನಾಯಕ್, ನನ್ನ ಮೊದಲ ಡೋಸ್ ಕೊರೊನಾ ಲಸಿಕೆ ಪಡೆದ ವಿಚಾರವನ್ನ ಹಂಚಿಕೊಳ್ಳೋದಕ್ಕೆ ಖುಷಿಯಾಗುತ್ತಿದೆ. ಲಸಿಕೆಯನ್ನ ಜನರಿಗೆ ತಲುಪಿಸುತ್ತಿರುವ ನಮ್ಮ ದೇಶದ ವಿಜ್ಞಾನಿಗಳು, ಆರೋಗ್ಯ ಸಿಬ್ಬಂದಿಯ ಕಾರ್ಯಕ್ಕೆ ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಒಡಿಶಾ ರಾಜ್ಯದ ಜನತೆಗೆ ಕೊರೊನಾ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.