
ಭುವನೇಶ್ವರ: ಸರ್ಕಾರದ ನಡೆಗೆ ಬೇಸತ್ತ ಬಿಜೆಪಿ ಶಾಸಕರೊಬ್ಬರು ವಿಧಾನಸಭೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಭತ್ತ ಖರೀದಿಗೆ ಸರ್ಕಾರ ಮುಂದಾಗುತ್ತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಮನನೊಂದು ವಿಧಾನಸಭೆಯಲ್ಲಿಯೇ ಶಾಸಕ ಸುಭಾಷ್ ಪಾಣಿಗ್ರಹಿ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಸುಭಾಷ್ ಅಪಾಯದಿಂದ ಪಾರಾಗಿದ್ದಾರೆ. ದೇಬ್ ಗಢದಲ್ಲಿ ಸರ್ಕಾರ ಭತ್ತ ಖರೀದಿಸುತ್ತಿರಲಿಲ್ಲ. ಎರಡು ಲಕ್ಷ ಕ್ವಿಂಟಾಲ್ ಗಿಂತಲೂ ಹೆಚ್ಚು ಭತ್ತ ಕೊಳೆಯುತ್ತಿದೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದ ಗಮನಸೆಳೆಯುವ ಉದ್ದೇಶದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಶಾಸಕ ಸುಭಾಷ್ ತಿಳಿಸಿದ್ದಾರೆ.