
ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್ ಗೌರವಾರ್ಥ ಒಡಿಶಾದ ಭುವನೇಶ್ವರದ ಕಲಾವಿದರೊಬ್ಬರಿಂದ ಅವರಿಗೆ ವಿಶೇಷ ಗೌರವ ಸಿಕ್ಕಿದೆ.
ಎಲ್. ಈಶ್ವರ ರಾವ್ ಹೆಸರಿನ ಈ ಕಲಾವಿದ ಗಾಜಿನ ಬಾಟಲಿಯೊಂದರಲ್ಲಿ ಬಿಡೆನ್ ರ ಪುಟ್ಟದೊಂದು ಕಲಾಕೃತಿಯನ್ನು ರಚಿಸಿದ್ದಾರೆ. ಏಳು ದಿನಗಳ ಶ್ರಮದಿಂದ ನಿರ್ಮಿಸಲಾದ ಈ ಕಲಾಕೃತಿಗೆ ರಾವ್ ಕಲ್ಲು, ಗಾಜು, ಕಾಗದ ಹಾಗೂ ಜೇಡಿ ಮಣ್ಣನ್ನು ಬಳಸಿದ್ದಾರೆ. ಈ ಚಿತ್ರವು 6.5 x 4 ಇಂಚು ವಿಸ್ತಾರವಿದ್ದು ಗಾಜಿನ ಬಾಟಲಿಯೊಳಗೆ ತೂರಿಸಿ ಇಡಲಾಗಿದೆ.
ಬಿಡೆನ್ ಅಧಿಕಾರಾವಧಿಯಲ್ಲಿ ಭಾರತ ಹಾಗೂ ಅಮೆರಿಕ ಸಂಬಂಧಗಳು ಸುಧಾರಿಸುತ್ತವೆ ಎಂಬ ಆಶಾಭಾವನೆಯನ್ನು ರಾವ್ ಇದೇ ವೇಳೆ ವ್ಯಕ್ತಪಡಿಸಿದ್ದಾರೆ.
https://www.facebook.com/ANINEWS.IN/posts/3533288083450596