
ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ದುರ್ಗಾ ಪೂಜೆಯ ರಂಗಿನಲ್ಲಿ ಮಿಂದೇಳುತ್ತದೆ. ದುರ್ಗಾ ಪೂಜೆ ಪೆಂಡಾಲುಗಳು ಇಡೀ ರಾಜ್ಯದ ಉದ್ದಗಲಕ್ಕೂ ತಲೆಯೆತ್ತಿ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಕೋಲ್ಕತ್ತಾದಲ್ಲಿರುವ ದುರ್ಗಾ ಪೂಜಾ ಪೆಂಡಾಲ್ ಒಂದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ತಮ್ಮ ಪತಿ ನಿಖಿಲ್ ಜೈನ್ ಜೊತೆಗೆ ಭೇಟಿ ಕೊಟ್ಟು, ಸಾಂಪ್ರದಾಯಿಕ ’ಢಾಕಿ’ ಡ್ರಮ್ ವಾದ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಪೆಂಡಾಲ್ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರೂ ಸಹ ಮಾಸ್ಕ್ ಧರಿಸಿಕೊಂಡು ಸಾರ್ವಜನಿಕ ಸ್ವಾಸ್ಥ್ಯ ಮೆರೆಯುವ ಮೂಲಕ ಸೇಫ್ ಆಗಿ ಹಬ್ಬವನ್ನು ಆಚರಿಸುತ್ತಿದ್ದಾರೆ.