ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಅದೇ ರೀತಿ ಉತ್ತರಪ್ರದೇಶದ ಮತ್ತೊಂದು ವಿವಾದಿತ ಸ್ಥಳವಾಗಿರುವ ಮಥುರಾದಲ್ಲಿ ಶ್ರೀಕೃಷ್ಣ ದೇವಾಲಯದ ಜಾಗ ದೊರಕಿಸಿಕೊಡಲು ಕೃಷ್ಣ ಜನ್ಮಭೂಮಿ ನಿರ್ಮಾಣ ನ್ಯಾಸ ಸ್ಥಾಪನೆಯಾಗಿದೆ.
ದೇಶದ 14 ರಾಜ್ಯಗಳ 80 ಸಂತರು ಸಮಿತಿಯಲ್ಲಿದ್ದು, ವೃಂದಾವನದ 11 ಸಂತರು ಟ್ರಸ್ಟಿಗಳಾಗಿದ್ದಾರೆ. ಶೀಘ್ರದಲ್ಲೇ ಎಲ್ಲರಿಂದ ಸಹಿ ಸಂಗ್ರಹ ಚಳವಳಿ ನಡೆಸಲಾಗುವುದು. ಮಥುರಾ ಕೃಷ್ಣ ಜನ್ಮಸ್ಥಾನದಲ್ಲಿ ದೇವಾಲಯವಿದ್ದು ಅದಕ್ಕೆ ಹೊಂದಿಕೊಂಡಂತೆ ಶಾಹಿ ಈದ್ಗಾ ಮೈದಾನವಿದೆ. ಮೈದಾನ ಜಾಗ ಶ್ರೀಕೃಷ್ಣ ದೇವಾಲಯಕ್ಕೆ ಸೇರಿದ್ದಾಗಿದೆ ಎಂಬುದು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ವಾದವಾಗಿದೆ.
4.5 ಎಕರೆ ಜಾಗವನ್ನು ರಂಗಮಂಚವಾಗಿ ಬಳಸಲು ಅನುಮತಿ ಕೋರಿ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ. ವಿಶ್ವ ಹಿಂದೂ ಪರಿಷತ್ ಕೂಡ ತನ್ನ ಮುಂದಿನ ಗುರಿ ಮಥುರಾ ಹಾಗೂ ಕಾಶಿವಿಶ್ವನಾಥ ದೇಗುಲ ಎಂದು ಹೇಳುತ್ತಿದೆ.