ಸದಾ ಹೆಣ್ಣುಮಕ್ಕಳು ಜೀನ್ಸ್ ಧರಿಸೋದು, ಚಿಕ್ಕ ಡ್ರೆಸ್ಗಳನ್ನ ಹಾಕೋದು, ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಮೊಬೈಲ್ ಬಳಕೆ ಮಾಡೋದನ್ನ ಬ್ಯಾನ್ ಮಾಡಿ ಸುದ್ದಿಯಲ್ಲಿರುತ್ತಿದ್ದ ಖಾಪ್ ಪಂಚಾಯತ್ ಈ ಬಾರಿ ಗಂಡು ಮಕ್ಕಳ ಹಕ್ಕಿನ ಮೇಲೆ ಆಕ್ರಮಣ ಮಾಡಿದೆ.
ಉತ್ತರ ಪ್ರದೇಶ ಮುಝಾಫರ್ನಗರದ ಖಾಪ್ ಪಂಚಾಯ್ತಿ ಸದಸ್ಯರು ಪುರುಷರು ಶಾರ್ಟ್ಸ್ , ತ್ರೀ ಫೋರ್ಥ್ ಧರಿಸಬಾರದು ಅಂತಾ ಹೇಳಿದೆ. ಈ ವಿಚಾರವಾಗಿ ಮಾತನಾಡಿದ ಪಂಚಾಯತ್ ಮುಖ್ಯಸ್ಥ ನರೇಶ್ ಟಿಕೈತ್, ನಾವು ಹಿರಿಯರೆಲ್ಲ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು ಶಾರ್ಟ್ಸ್ ಧರಿಸೋದನ್ನ ಬ್ಯಾನ್ ಮಾಡಿದ್ದೇವೆ. ಇದು ಆದೇಶ ಅಂತಾ ನಿಮಗೆ ಎನಿಸಬಹುದು. ಆದರೆ ಇದು ಸಮಾಜದ ಹಿತದೃಷ್ಟಿಯಿಂದ ನಾವೆಲ್ಲ ಸೇರಿ ತೆಗೆದುಕೊಂಡ ಮಹತ್ವದ ಹೆಜ್ಜೆ ಅಂತಾ ಕೇಳಿದ್ದಾರೆ. ಆದೇಶವನ್ನ ಉಲ್ಲಂಘಿಸಿ ಯಾರಾದ್ರೂ ಶಾರ್ಟ್ಸ್ನಲ್ಲಿ ಓಡಾಡುತ್ತಿರುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ದಾರೆ.