ನವದೆಹಲಿ : ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14 ನೇ ಕಂತು ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ಪಿಎಂ-ಕಿಸಾನ್ ನ 13 ನೇ ಕಂತನ್ನು ಮೋದಿ ಸರ್ಕಾರ ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. 14 ನೇ ಕಂತಿನ 2,000 ರೂ. ಹಣವನ್ನು ಇನ್ನೂ ಜಮಾ ಮಾಡಿಲ್ಲ. ಈ ಬಾರಿ ಪಿಎಂ-ಕಿಸಾನ್ ಹಣ ವಿತರಣೆ ವಿಳಂಬವಾಗಿದೆ.
ಈ ಹಿನ್ನೆಲೆಯಲ್ಲಿ, ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಬಗ್ಗೆ ಪ್ರಮುಖ ನವೀಕರಣವನ್ನು ಸ್ವೀಕರಿಸಲಾಗಿದೆ. ಕೇಂದ್ರ ಸರ್ಕಾರವು ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಯಾವಾಗ ಜಮಾ ಮಾಡುತ್ತದೆ ಎಂದು ತಿಳಿದುಬಂದಿದೆ. ಪಿಎಂ-ಕಿಸಾನ್ ಹಣವನ್ನು ಈ ತಿಂಗಳಲ್ಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು. ಫೆಬ್ರವರಿ 27 ರಂದು ಕೇಂದ್ರ ಸರ್ಕಾರವು 13 ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿತು. ಈಗ 14 ನೇ ಕಂತು ಬರಲಿದೆ.
ಹೌದು, ಜುಲೈ 28 ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ ನೇರ ನಗದು ಜಮೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಇದರಿಂದಾಗಿ ದೇಶದ 8.5 ಕೋಟಿ ರೈತರಿಗೆ ಅನುಕೂಲವಾಗುತ್ತದೆ. ವರ್ಷಕ್ಕೆ ನಾಲ್ಕು ಕಂತಿನಲ್ಲಿ ಕೃಷಿಕರಿಗೆ ಕೇಂದ್ರ ಸರ್ಕಾರ 6 ಸಾವಿರ ರೂ. ನೆರವು ನೀಡುತ್ತಿದೆ.