alex Certify ಕೊರೊನಾ ಲಸಿಕೆ ಲಭ್ಯತೆ ಕುರಿತು ʼಮಹಾʼ ಆರೋಗ್ಯ ಸಚಿವರಿಂದ ಶಾಕಿಂಗ್‌ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಲಭ್ಯತೆ ಕುರಿತು ʼಮಹಾʼ ಆರೋಗ್ಯ ಸಚಿವರಿಂದ ಶಾಕಿಂಗ್‌ ಸಂಗತಿ ಬಹಿರಂಗ

ಮಹಾರಾಷ್ಟ್ರಕ್ಕೆ ಕೊರೊನಾ ವೈರಸ್​​ ಗಂಭೀರ ಹೊಡೆತವನ್ನೇ ನೀಡಿದೆ. ಪ್ರತಿನಿತ್ಯ ಸರಾಸರಿ 50 ಸಾವಿರ ಕೇಸ್​ಗಳು ವರದಿಯಾಗ್ತಿವೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವವಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಲಸಿಕೆಯ ಅಭಾವದಿಂದಾಗಿ ಲಸಿಕಾ ಕೇಂದ್ರಕ್ಕೆ ಬರುವ ಜನತೆಯನ್ನ ಅನಿವಾರ್ಯವಾಗಿ ವಾಪಸ್​ ಕಳಿಸಬೇಕಾಗಿ ಬರ್ತಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಬಳಿ 20 – 40 ವಯಸ್ಸಿನವರನ್ನೂ ಆದ್ಯತೆಯ ಪಟ್ಟಿಗೆ ಸೇರಿಸಿ ಎಂದು ಮನವಿ ಮಾಡಿದೆ.

ದೇಶದಲ್ಲಿ ಕೊರೊನಾ ಬಾಧಿತ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 55 ಸಾವಿರ ಕೊರೊನಾ ಕೇಸ್​ಗಳು ವರದಿಯಾಗಿವೆ.

ಲಸಿಕಾ ಕೇಂದ್ರಗಳಲ್ಲಿ ನಮ್ಮ ಬಳಿ ಅಗತ್ಯ ಪ್ರಮಾಣದ ಡೋಸೇಜ್​ಗಳಿಲ್ಲ. ಹೀಗಾಗಿ ಜನರನ್ನ ವಾಪಸ್​ ಕಳಿಸಲಾಗುತ್ತಿದೆ. ಇದರ ನಡುವೆ 20 ರಿಂದ 40 ವಯಸ್ಸಿನವರನ್ನೂ ಆದ್ಯತೆಯ ಪಟ್ಟಿಗೆ ಸೇರಿಸಿ ಎಂದು ಕೇಂದ್ರ ಬಳಿ ಮನವಿ ಮಾಡಿದ್ದೇವೆ ಎಂದು ತೋಪೆ ಹೇಳಿದ್ರು.

ಕೊರೊನಾ ಸೋಂಕಿತರಿಗೆ ಚಿಕಿತ್ಸೆಯ ವಿಚಾರವಾಗಿಯೂ ಮಾತನಾಡಿದ ಅವ್ರು. ಪುಣೆ, ಮುಂಬೈ, ನಾಸಿಕ್​ನಲ್ಲಿ ಹಾಸಿಗೆಗಳ ಸಂಖ್ಯೆಯನ್ನ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದ್ದೇವೆ ಅಂತಂದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...