
ತಾಜ್ ನಗರ ಆಗ್ರಾದಲ್ಲಿ ಬುಧವಾರ ಹಣಕಾಸು ಕಂಪನಿಯ ನೌಕರರು, ಪ್ರಯಾಣಿಕರಿಂದ ತುಂಬಿದ ಬಸ್ ಅಪಹರಿಸಿದ್ದಾರೆ. ಮಾಹಿತಿಯ ಪ್ರಕಾರ, ಗುರುಗ್ರಾಮ್‌ನಿಂದ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಅಪಹರಿಸಲಾಗಿದೆ. ಚಾಲಕ ಮತ್ತು ಕಂಡಕ್ಟರ್ ಇಳಿಸಿ ಬಸ್ ಅನ್ನು ಅಪರಿಚಿತ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿದೆ. ಬಸ್‌ನಲ್ಲಿ ಒಟ್ಟು 34 ಪ್ರಯಾಣಿಕರಿದ್ದರು ಎನ್ನಲಾಗಿದೆ.
ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಠಾಣೆ ಪೊಲೀಸರಿಗೆ ಬಸ್ ಅಪಹರಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕಂಡಕ್ಟರ್ ಹಾಗೂ ಚಾಲಕನ ಮಾಹಿತಿ ನಂತ್ರ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಬಸ್ ಅಪಹರಿಸಿದವರು ಶ್ರೀರಾಮ್ ಫೈನಾನ್ಸ್ ಕಂಪನಿ ಸಿಬ್ಬಂದಿ ಎಂದು ಚಾಲಕ ಹೇಳಿದ್ದಾನೆ. ಬಸ್ ಹತ್ತಿದವರು ಫೈನಾನ್ಸ್ ಕಂಪನಿ ಸಿಬ್ಬಂದಿ ಎಂದಿದ್ದಾರೆ. ಚಾಲಕ, ಕಂಡಕ್ಟರ್ ಗೆ ಊಟ ಮಾಡಿಸಿ 300 ರೂಪಾಯಿ ನೀಡಿದ್ದಾರಂತೆ. ಬಸ್ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಸ್ ಮಾಲೀಕ ಕಂತು ಪಾವತಿ ಮಾಡಿರಲಿಲ್ಲವಂತೆ. ನಾಲ್ವರು ಸಿಬ್ಬಂದಿ ಬಸ್ ಅಪಹರಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಚಾಲಕ, ಕಂಡಕ್ಟರ್ ಮಾತಿನ ಮೇಲೆ ಕಾರ್ಯಾಚರಣೆ ಶುರು ಮಾಡಿದ್ದಾರೆ. ಆದ್ರೆ ಬಸ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗ್ತಿಲ್ಲ.