ನೋಯ್ಡಾ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಈ ಘಟನೆ ಅನ್ವರ್ಥಕವಾಗಿದೆ. ನೋಯ್ಡಾದಲ್ಲಿ ಒಬ್ಬ ಪೊಲೀಸನೇ ಲೂಟಿ ಮಾಡಿದ ಘಟನೆ ನಡೆದಿದೆ.
ಕಾರಿನಲ್ಲಿ ಪರಿಶೀಲನೆ ನಡೆಸುವ ವೇಳೆ ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಗನ್ ತೋರಿಸಿ ಲೂಟಿ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಓಂಬೀರ್ ಭಾರತಿ ಎಂಬುವವರನ್ನು ಅಮಾನತು ಮಾಡಲಾಗಿದೆ. ಮತ್ತು ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ದಾದ್ರಿ ಪೊಲೀಸರು ಪರಿಶೀಲನೆಗಾಗಿ ಕಾರನ್ನು ತಡೆದರು ಈ ಸಂದರ್ಭದಲ್ಲಿ ಓಂಬೀರ್ ಭಾರತಿ ಹಲ್ಲೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಗ್ರೇಟರ್ ನೋಯ್ಡಾ ಕಮೀಶನರ್ ರಾಜೇಶ ಕುಮಾರ್ ಸಿಂಗ್ ತಿಳಿಸಿದ್ದಾರೆ.