
ಗ್ರೇಟರ್ ನೋಯ್ಡಾದಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಸೊಸೆ ಮೇಲೆ ಕಣ್ಣು ಹಾಕಿದ ಮಾವನೊಬ್ಬ ಅತ್ಯಾಚಾರವೆಸಗಿದ್ದಾನೆ. ಘಟನೆ ಬಗ್ಗೆ ಮಹಿಳೆ ದೂರು ನೀಡಿದ್ದು, ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ಮೂಲಗಳ ಪ್ರಕಾರ, ಲಾಕ್ ಡೌನ್ ಸಂದರ್ಭದಲ್ಲಿ ಮಾವ, ಸೊಸೆ ಮೇಲೆ ಅತ್ಯಾಚಾರವೆಸಗಿದ್ದನಂತೆ. ಇದನ್ನು ಮಹಿಳೆ ಪತಿಗೆ ತಿಳಿಸಿದ್ದಾಳೆ. ಆದ್ರೆ ಪತಿ ಏನೂ ಮಾತನಾಡದೆ ಮೌನವಾಗಿದ್ದನಂತೆ. ಜೂನ್ ನಲ್ಲಿ ಮಾವ ಮತ್ತೆ ಅತ್ಯಾಚಾರಕ್ಕೆ ಪ್ರಯತ್ನ ನಡೆಸಿದ್ದಾನೆ.
ಕುಟುಂಬಸ್ಥರು ಹಲ್ಲೆ ಕೂಡ ನಡೆಸಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾಳೆ. ಒಂದು ವರ್ಷದ ಹಿಂದೆ ವಿವಾಹ ನಡೆದಿತ್ತು ಎನ್ನಲಾಗಿದೆ.