ಕರೊನಾ ವೈರಸ್ನಿಂದಾಗಿ ಜನಸಾಮಾನ್ಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ರೆ ಬಡ ಮನೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಾ ಇದ್ದಾರೆ. ಆನ್ಲೈನ್ ಕ್ಲಾಸ್ನಲ್ಲಿ ಖಾಸಗಿ ಶಾಲೆಗಳು ಬ್ಯುಸಿ ಆಗಿದ್ರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡ್ತಿರೋ ಹಳ್ಳಿಗಾಡಿನ ಮಕ್ಕಳು ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ಗಳನ್ನ ಖರೀದಿ ಮಾಡೋಕೆ ಆಗದೇ ಸಂಕಷ್ಟದಲ್ಲಿದ್ದಾರೆ.
ಮಕ್ಕಳ ಈ ಕಷ್ಟವನ್ನ ಅರಿತ ದೆಹಲಿಯ ಪೊಲೀಸ್ ಥಾನ್ ಸಿಂಗ್ ಕರೊನಾದಿಂದಾಗಿ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ಕೆಂಪು ಕೋಟೆ ಸಮೀಪದಲ್ಲೇ ಇರುವ ಸಾಯಿ ದೇವಸ್ಥಾನದಲ್ಲಿ ಥಾನ್ ಸಿಂಗ್ ಮಕ್ಕಳಿಗೆ ಶಿಕ್ಷಕರಾಗಿದ್ದಾರೆ,
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪೊಲೀಸ್ ಥಾನ್ ಸಿಂಗ್, ನಾನು ಈ ಹಿಂದೆಯೂ ಈ ರೀತಿ ತರಗತಿಗಳನ್ನ ನಡೆಸುತ್ತಿದ್ದೆ. ಕರೊನಾದಿಂದಾಗಿ ಮಕ್ಕಳ ಸಮಸ್ಯೆ ಆಗಬಾರದು ಅಂತಾ ಶಾಲೆಯನ್ನ ಬಂದ್ ಮಾಡಿದೆ. ಆದರೆ ಇಲ್ಲಿನ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಾ ಇರದನ್ನ ಕಂಡು ಮತ್ತೆ ನನ್ನ ತರಗತಿಗಳನ್ನ ಶುರು ಮಾಡಿದ್ದೇನೆ ಅಂತಾ ಹೇಳಿದ್ರು.
ತರಗತಿಗೆ ಬರುವ ಮಕ್ಕಳಿಗೆ ಥಾನ್ ಸಿಂಗ್ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನ ವಿತರಣೆ ಮಾಡಿದ್ದಾರೆ. ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲಾಗ್ತಿದೆ.