ನವದೆಹಲಿ: 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದ ಚುನಾವಣಾ ನಿರ್ಧಾರ ಬದಲಿಸಿದೆ.
65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನದ ಸೌಲಭ್ಯ ನೀಡದಿರಲು ನಿರ್ಧರಿಸಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತ್ತು ಇತರೆ ಉಪಚುನಾವಣೆಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನ ಮಾಡಲು ಅವಕಾಶ ಇರುವುದಿಲ್ಲ.
ಕೊರೋನಾ ನಿಯಮಗಳು ಮತ್ತು ಮಾನವ ಸಂಪನ್ಮೂಲ, ಸಮರ್ಪಕ ವ್ಯವಸ್ಥೆಗಳು ಇಲ್ಲದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 65 ವರ್ಷ ಮೇಲ್ಪಟ್ಟವರಿಗೆ ಮತದಾನಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಿದೆ.
80 ವರ್ಷ ದಾಟಿದ ಹಿರಿಯರು, ವಿಕಲಚೇತನರು, ಕೊರೋನಾ ಸೋಂಕಿತರು ಅಂಚೆ ಮತದಾನ ಮಾಡಬಹುದು ಎಂದು ಹೇಳಲಾಗಿದೆ. ಈ ಮೊದಲು 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡುವುದಾಗಿ ಹೇಳಲಾಗಿತ್ತು.