ಕೊರೊನಾ ವೈರಸ್ ತಡೆಗಾಗಿ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಇನ್ನೂ ಯಾವುದೇ ಯೋಜನೆಯನ್ನ ರೂಪಿಸಿಲ್ಲ ಎಂದು ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹ್ಮೂದ್ ಅಲಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ನೆರೆಯ ರಾಜ್ಯ ಮಹಾರಾಷ್ಟ್ರದಲ್ಲೂ ಕೊರೊನಾ ಮಿತಿ ಮೀರಿದೆ. ಇದೆಲ್ಲದರ ನಡುವೆಯೂ ಹೈದರಾಬಾದ್ನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಯಾವುದೇ ರೀತಿಯ ಯೋಚನೆಯನ್ನ ಮಾಡಿಲ್ಲ ಎಂದು ಹೇಳಿದ್ರು.
ಕೊರೊನಾವನ್ನ ತಡೆಯಬೇಕು ಅಂತಾ ನಿರ್ಬಂಧಗಳನ್ನ ಹೇರಿದ್ರೆ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತೆ ಎಂಬ ಕಾರಣದಿಂದ ಪೊಲೀಸರು ನೈಟ್ಕರ್ಫ್ಯೂ ಬಗ್ಗೆ ಹೆಚ್ಚಿನ ಉಮೇದಿ ತೋರಿಲ್ಲ. ಕೊರೊನಾ ವೈರಸ್ ನಿಯಂತ್ರಣವನ್ನ ಕಡಿಮೆ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದ್ರು.
ಕರ್ಫ್ಯೂ ಹೇರೋದ್ರಿಂದ ನಗರದ ಜೀವನ ಹಾಗೂ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಸಾರ್ವಜನಿಕರು ಕೊರೊನಾ ವಿರುದ್ಧ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಕೆಯಂತಹ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ರು.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಶಾಲೆಗಳು ತೆರೆದಿರೋದು ಸೂಕ್ತವೇ ಎಂಬ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ಅಲಿ, ಈ ಬಗ್ಗೆ ಒಂದೆರಡು ದಿನಗಳಲ್ಲಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ರು.