ವಿಶ್ವಕ್ಕೆ ಬಂದಪ್ಪಳಿಸಿರೋ ಕೊರೊನಾ ಮಹಾಮಾರಿ ಜನರು ಊಹೆಯೂ ಮಾಡದ ರೀತಿಯಲ್ಲಿ ಬದುಕನ್ನ ಬದಲಾಯಿಸಿಬಿಟ್ಟಿದೆ. ದಿನನಿತ್ಯದ ಸಾಮಗ್ರಿ ಖರೀದಿ ಮಾಡೋಕೂ ಕಷ್ಟ ಎಂಬ ಸ್ಥಿತಿಗೆ ಜನರು ಬಂದು ತಲುಪಿದ್ದಾರೆ.
ಸಾಮಾಜಿಕ ಅಂತರ, ಕ್ವಾರಂಟೈನ್ ನಿಯಮಗಳು ಜನರಿಗೆ ಒಂಟಿತನ ಅಂದ್ರೆ ಏನು ಅನ್ನೋದನ್ನ ತೋರಿಸಿಬಿಟ್ಟಿವೆ.
ಕೊರೊನಾದಿಂದಾಗಿ ಅನೇಕರು ತಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಸಹಾಯಕವಾಗಿದ್ರೆ ಇನ್ನು ಕೆಲವರಿಗೆ ತುತ್ತು ಊಟಕ್ಕೂ ಏನು ಮಾಡೋದು ಎಂಬ ಚಿಂತೆಗೆ ನೂಕಿ ಬಿಟ್ಟಿದೆ. ಕೊರೊನಾ ಜೊತೆ ಜನರು ಬದುಕೋಕೆ ಶುರು ಮಾಡಿದ್ದು ಜನರು ವಿಚಿತ್ರ ರೀತಿಯಲ್ಲಿ ತಮ್ಮ ಅಸಹಾಯಕತೆಯನ್ನ ಹೊರ ಹಾಕ್ತಿದ್ದಾರೆ .
ಯುಕೆಯ ಪೂರ್ವ ಹಾಂಪ್ಸೈರ್ ಭಾಗದ ವೃದ್ಧನ ಪತ್ನಿ ಕೆಲ ದಿನಗಳ ಹಿಂದಷ್ಟೇ ಕ್ಯಾನ್ಸರ್ನಿಂದ ಮೃತರಾಗಿದ್ರು. ನಿವೃತ್ತಿ ಹೊಂದಿರೋ 75 ವರ್ಷದ ಟೊನಿ ವಿಲಿಯಮ್ಸ್ ಪತ್ನಿ ಅಗಲಿಕೆ ಬಳಿಕ ಏಕಾಂಗಿಯಾಗಿದ್ದಾರೆ, ಕೊರೊನಾ ಹಿನ್ನೆಲೆ ಮಕ್ಕಳು, ಸಂಬಂಧಿಕರ ಮನೆಗೂ ಹೋಗಲಾರದ ಸ್ಥಿತಿ ಎದುರಾಗಿದೆ. ಹೀಗಾಗಿ ತಮ್ಮ ಮನೆಯ ಕಿಟಕಿಗೆ ಪೋಸ್ಟರ್ ಅಂಟಿಸಿರೋ ಟೋನಿ ಇದರಲ್ಲಿ ತನ್ನ ಒಬ್ಬಂಟಿತನದ ಬಗ್ಗೆ ಬರೆದುಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ ಅನೇಕರು ಟೋನಿಯವರನ್ನ ಮಾತನಾಡಿಸುತ್ತಿದ್ದಾರಂತೆ.
ಅಮೆರಿಕದ ಫಾಸ್ಟ್ ಫುಡ್ ಮಳಿಗೆಗಳು ಏಪ್ರಿಲ್ ತಿಂಗಳಲ್ಲಿ ಉಚಿತವಾಗಿ ಕೋಳಿ ಮಾಂಸದಿಂದ ತಯಾರಾದ ಖಾದ್ಯಗಳನ್ನ ನೀಡುವ ಘೋಷಣೆ ಮಾಡಿದ್ದರು. ಇದನ್ನ ನೋಡಿದ ಒರೆಗಾನ್ ಮೂಲದ ವ್ಯಕ್ತಿ ಉಚಿತ ಖಾದ್ಯ ಖರೀದಿಸೋಕೆ ಮುಂದಾಗಿದ್ದಾನೆ. ಆದರೆ ಒಂದು ಅಂಗಡಿಯಲ್ಲಿ ಒಬ್ಬರಿಗೆ ಒಂದು ಬಾರಿ ಮಾತ್ರ ಉಚಿತ ಖಾದ್ಯ ಅಂತ ಅಂಗಡಿಗಳು ಹೇಳುತ್ತಿದ್ದಂತೆಯೇ ಆತ ಒಂದು ದಿನಕ್ಕೆ 11ಕ್ಕೂ ಹೆಚ್ಚು ಚಿಕನ್ ಅಂಗಡಿಗೆ ಭೇಟಿ ನೀಡಿ ಚಿಕನ್ ಖಾದ್ಯ ಖರೀದಿಸಿದ್ದಾನೆ.
ಕರ್ನಾಟಕದಲ್ಲೂ ಕೊರೊನಾ ಲಾಕ್ಡೌನ್ ಜಾರಿಯಾಗಿದ್ದ ವೇಳೆ ಸಲೂನ್ಗಳನ್ನೂ ಬಂದ್ ಮಾಡಲಾಗಿತ್ತು. ಇದರಿಂದ ಕಷ್ಟ ಅನುಭವಿಸಿದ ಮೇವುಂಡಿ ಗ್ರಾಮದ ಜನತೆ ಇದಕ್ಕೊಂದು ಪ್ಲಾನ್ ಹುಡುಕಿದ್ದಾರೆ. ಗ್ರಾಮಸ್ಥರೇ ಒಂದಾಗಿ ಒಬ್ಬರಿಗೊಬ್ಬರ ತಲೆಗೂದಲನ್ನ ಕತ್ತರಿಸಿಕೊಟ್ಟಿದ್ದಾರೆ.