ದೇಶದಲ್ಲಿರುವ 4000 ಮಿಲಿಟರಿ ಶಾಪ್ಗಳಲ್ಲಿ ಸರಕುಗಳನ್ನು ಆಮದು ಮಾಡುವುದನ್ನ ನಿಲ್ಲಿಸಿ ಅಂತಾ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ವಿದೇಶಿ ಮದ್ಯ ಸಂಸ್ಥೆಗಳಾದ ಡಿಯಾಜಿಯೋ ಹಾಗೂ ಪೆರ್ನೋಡ್ ರಿಕಾರ್ಡ್ಗೆ ಹೊಡೆತ ನೀಡಿದೆ.
ಭಾರತದ ರಕ್ಷಣಾ ಕ್ಯಾಂಟೀನ್ಗಳಲ್ಲಿ ಲಭ್ಯವಿರುವ ಮದ್ಯ, ಎಲೆಕ್ಟ್ರಾನಿಕ್ಸ್ ಹಾಗೂ ಇತರೆ ವಸ್ತುಗಳನ್ನ ಸೈನಿಕರು ಹಾಗೂ ಮಾಜಿ ಸೈನಿಕರ ಕುಟುಂಬಕ್ಕೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತೆ. ಈ ಅಂಗಡಿಗಳಲ್ಲಿ ಇದೀಗ ವಿದೇಶಿ ವಸ್ತುಗಳಿಗೆ ಬ್ರೇಕ್ ಹಾಕಲಾಗಿದೆ.
ಪ್ರಧಾನಿ ಮೋದಿಯವರ ಮಾತಿನಂತೆ ದೇಶಿಯ ಉತ್ಪನ್ನಗಳನ್ನ ಉತ್ತೇಜಿಸುವ ಸಲುವಾಗಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ ಅಂತಾ ಹೇಳಲಾಗ್ತಿದೆ. ಆದರೆ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆಯನ್ನ ನೀಡಲು ಕೇಂದ್ರ ರಕ್ಷಣಾ ಸಚಿವಾಲಯದ ವಕ್ತಾರರು ನಿರಾಕರಿಸಿದ್ದಾರೆ.