ಕೊರೊನಾ ವೈರಸ್ ಸಂಕಷ್ಟ ದೇಶದಲ್ಲಿ ಶುರುವಾದಾಗಿನಿಂದ ಫೋನ್ ಕರೆ ಮಾಡುವ ವೇಳೆ ಜನರು ಕೊರೊನಾ ಜಾಗೃತಿ ಸಂದೇಶವನ್ನ ಕೇಳುತ್ತಾರೆ. ಸಧ್ಯ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ನೀಡುತ್ತಿರುವ ಆಡಿಯೋ ಸಂದೇಶ ಎಲ್ಲರ ಮೊಬೈಲ್ನಲ್ಲಿ ಕಾಲರ್ ಟ್ಯೂನ್ನಂತೆ ಕೇಳುತ್ತಿತ್ತು.
ಕೊರೊನಾ ವಿರುದ್ಧ ಸಂಪೂರ್ಣ ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಹೋರಾಡುತ್ತಿದೆ ಎಂದು ಹೇಳುವ ಮೂಲಕ ಅಮಿತಾಬ್ ಬಚ್ಚನ್ರ ಧ್ವನಿಯಲ್ಲಿ ಜಾಗೃತಿ ಸಂದೇಶ ಆರಂಭವಾಗುತ್ತಿತ್ತು. ಕಾಲರ್ ಟ್ಯೂನ್ನಲ್ಲಿ ಆಗಾಗ್ಗೆ ಕೈ ತೊಳೆಯುವುದು, ಮಾಸ್ಕ್ ಧರಿಸೋದು ಹಾಗೂ ಸಾಮಾಜಿಕ ಅಂತರ ಕಾಪಾಡೋದ್ರ ಬಗ್ಗೆ ಹೇಳಲಾಗುತ್ತಿತ್ತು.
ಆದರೆ ಜನವರಿ 16ರಿಂದ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈವ್ ಆರಂಭವಾಗಿದ್ದು ಕಡ್ಡಾಯ ಕರೆ ಧ್ವನಿಯನ್ನ ಬದಲಾವಣೆ ಮಾಡಲಾಗಿದೆ. ಈ ಹೊಸ ಕಾಲರ್ ಟ್ಯೂನ್ನಲ್ಲಿ ಸ್ತ್ರೀ ಧ್ವನಿ ಇದ್ದು ಇದರಲ್ಲಿ ಲಸಿಕೆ ಬಗ್ಗೆ ಜನರಿಗೆ ಮಾಹಿತಿ ನೀಡಲಾಗ್ತಿದೆ.
ಹೊಸ ವರ್ಷವು ಕೋವಿಡ್ 19 ವಿರುದ್ಧ ಲಸಿಕೆಗಳ ರೂಪದಲ್ಲಿ ಹೊಸ ಆಶಾ ಕಿರಣವನ್ನ ಹೊತ್ತು ತಂದಿದೆ ಎಂದು ಈ ಆಡಿಯೋ ಸಂದೇಶ ಆರಂಭವಾಗುತ್ತದೆ. ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಲಸಿಕೆಗಳು ವೈರಸ್ ವಿರುದ್ಧ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಈ ಕಾಲರ್ ಟ್ಯೂನ್ನಲ್ಲಿ ಹೇಳಲಾಗುತ್ತದೆ.