ಮಂಗಗಳ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್ ವಾರ್ ಇಬ್ಬರು ಮನುಷ್ಯರನ್ನು ಬಲಿ ಪಡೆದ ಘಟನೆ ಆಗ್ರಾದಲ್ಲಿ ಸಂಭವಿಸಿದೆ.
ಇಲ್ಲಿನ ಸತ್ಸಂಗ್ ಗಲಿಯಲ್ಲಿರುವ ಮನೆಯೊಂದರ ಮಾಲೀಕ ಹಾಗೂ ಅದನ್ನು ಕೆಡವುತ್ತಿದ್ದ ಕಾರ್ಮಿಕ ಗೋಡೆಯೊಂದರ ಬಳಿ ನಿಂತಿದ್ದಾಗಲೇ ಮಂಗಗಳ ಗುಂಪೊಂದು ಒಂದಕ್ಕೊಂದು ಕಚ್ಛಾಡುತ್ತಾ ಅಲ್ಲಿಗೆ ಬಂದಿವೆ. ಗದ್ದಲದ ಭರದಲ್ಲಿ ಆ ಪ್ರದೇಶದ ಸುತ್ತಾ ಅಡ್ಡಾಡಿವೆ. ಈ ಆರ್ಭಟದಲ್ಲಿ ಗೋಡೆ ಕುಸಿದು ಬಿದ್ದು ಮನೆಯ ಮಾಲೀಕ ಹಾಗೂ ಕಾರ್ಮಿಕ ಸಾವನ್ನಪ್ಪಿದ್ದಾರೆ.
ಕೋತಿಗಳ ಹಾವಳಿ ನಗರದ ತುಂಬಾ ಇದ್ದು, ನಗರದ ಮೇಯರ್ ನವೀನ್ ಜೈನ್ ಅವುಗಳನ್ನು ಹತ್ತಿರದ ಕಾಡುಗಳಿಗೆ ವರ್ಗಾಯಿಸಲು ಆದೇಶ ನೀಡಿದ್ದಾರೆ. ಈ ಸಂಬಂಧ ನಗರ ಪಾಲಿಕೆ ಕೆಲ ದಿನಗಳ ಹಿಂದೆಯೇ ಕಾರ್ಯೋನ್ಮಖವಾದರೂ ಸಹ ಪ್ರಾಣಿ ದಯಾ ಸಂಘಟನೆಗಳು ಇದಕ್ಕೆ ಆಸ್ಪದ ಕೊಟ್ಟಿಲ್ಲ.