ಮುಂಬೈ: 80 ದಿನಗಳ ನಿರಂತರ ಲಾಕ್ ಡೌನ್ ಬಳಿಕ ಮುಂಬೈ ಜನ ದೊಡ್ಡ ಸಂಖ್ಯೆಯಲ್ಲಿ ಸಂಜೆಯ ವಾಯು ವಿಹಾರಕ್ಕೆ ಬಂದಿದ್ದಾರೆ.
ಮುಂಬೈನ ಮರೈನ್ ಡ್ರೈವ್ ಶನಿವಾರ ಸಾಯಂಕಾಲದ ವಾಕಿಂಗ್ ಮಾಡುವ ಜನರಿಂದ ತುಂಬಿರುವ ಫೋಟೋವೊಂದನ್ನು ನಿಹಾರಿಕಾ ಕುಲಕರ್ಣಿ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
ಮಹಾರಾಷ್ಟ್ರ ಸರ್ಕಾರ ಜೂನ್ 3 ರಿಂದ ಲಾಕ್‌ಡೌನ್ ನಿಯಮಗಳನ್ನು ಕೊಂಚ ಸಡಿಲಿಸಿ ಬೆಳಗ್ಗೆ 5 ರಿಂದ ಸಾಯಂಕಾಲ 7 ರವರೆಗೆ ಜಾಗಿಂಗ್, ವಾಕಿಂಗ್ ಮುಂತಾದ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ.
ಜನ ಮಾಸ್ಕ್ ಹಾಕಿ, ಪರಸ್ಪರ ಅಂತರವೇ ಇಲ್ಲದೇ ಓಡಾಡುತ್ತಿದ್ದಾರೆ ಎಂದು ಟ್ವಿಟರ್ ಬಳಕೆದಾರರು ಈ ಫೋಟೊ ಶೇರ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬೈನ ಪ್ರಸಿದ್ಧ ಸಾರ್ವಜನಿಕ ಸ್ಥಳಗಳಾದ ಜುಹು, ಬಾಂದ್ರಾ, ಬ್ಯಾಂಡ್ ಸ್ಟಾಂಡ್, ಪವೈ ಲೇಕ್ ಮುಂತಾದೆಡೆ ಭಾನುವಾರ ಬೆಳಗ್ಗೆ ಸಾಕಷ್ಟು ಜನ ಸೇರಿದ್ದರು.