ಮನೆಯಲ್ಲಿ ಮಕ್ಕಳಿದ್ದರೆ ಸಾಕು ಯಾವ ಜಿಮ್, ವ್ಯಾಯಾಮಗಳೂ ಬೇಡ. ಆಡುವ ಮಕ್ಕಳನ್ನು ಹಿಡಿಯುವುದೇ ಒಂದು ದೊಡ್ಡ ಕಸರತ್ತು.
ಅಂಥದ್ದರಲ್ಲಿ ತ್ರಿವಳಿ ಮಕ್ಕಳಿದ್ದರೆ !? ಅವುಗಳನ್ನ ಹಿಡಿಯುವ ಅಪ್ಪ – ಅಮ್ಮನ ಪಾಡು ಅಷ್ಟಿಷ್ಟಲ್ಲ. ಅದರಲ್ಲೂ ಇಂಥಾ ತುಂಟ ಮಕ್ಕಳನ್ನ ಹಿಡಿಯುವ ಕಾಯಕ ಅಪ್ಪನ ಹೆಗಲಿಗೆ ಬಿದ್ದರೆ ಹೇಗಿರುತ್ತದೆ ?
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ತ್ರಿವಳಿಗಳನ್ನ ಹಿಡಿಯಲು ತಂದೆಯೊಬ್ಬ ಪಡುವ ಪಡಿಪಾಟಲನ್ನು ಬಿಂಬಿಸುವಂತಿದೆ.
ಮಕ್ಕಳನ್ನು ತಂದು ಒಂದು ಕಡೆ ಬಿಟ್ಟರೆ, ಒಂದೊಂದೇ ಮಕ್ಕಳು ಅಂಬೆಗಾಲಿಡುತ್ತಾ ಕಾಲ್ಕೀಳುತ್ತವೆ. ಅದರಲ್ಲೂ ಅಲ್ಲೇ ಇರುವ ಫ್ರಿಡ್ಜ್ ಬಳಿ ಹೋಗುವುದು, ಅದರ ಬಾಗಿಲು ತೆರೆಯುವುದು, ತಕ್ಷಣ ಹೊತ್ತಿಕೊಳ್ಳುವ ವಿದ್ಯುತ್ ದೀಪ, ಬೀಸುವ ತಣ್ಣನೆಯ ಗಾಳಿ ಅವುಗಳನ್ನ ಆಕರ್ಷಿಸಿಬಿಟ್ಟಿದ್ದವು. ಪದೇ ಪದೇ ಫ್ರಿಡ್ಜ್ ನತ್ತ ಅಂಬೆಗಾಲಿಡುವ ತ್ರಿವಳಿಗಳನ್ನ ತಡೆಯುವುದೇ ತಂದೆಯ ಜಿಮ್ ಕಸರತ್ತಿನಂತಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ತ್ರಿವಳಿಗಳಿರುವ ಮನೆ ವರವೇ ಸರಿ ಎಂದು ಐಎಫ್ಎಸ್ ಅಧಿಕಾರಿ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
https://twitter.com/susantananda3/status/1280763164242505728?ref_src=twsrc%5Etfw%7Ctwcamp%5Etweetembed%7Ctwterm%5E1280763164242505728%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fno-gym-subscription-required-dad-trying-to-keep-toddler-triplets-away-from-fridge-has-good-workout-session%2F618289
https://twitter.com/Murtagh71/status/1280766315230367744?ref_src=twsrc%5Etfw%7Ctwcamp%5Etweetembed%7Ctwterm%5E1280766315230367744%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fno-gym-subscription-required-dad-trying-to-keep-toddler-triplets-away-from-fridge-has-good-workout-session%2F618289
https://twitter.com/JoanneJ96366976/status/1280764689149034496?ref_src=twsrc%5Etfw%7Ctwcamp%5Etweetembed%7Ctwterm%5E1280764689149034496%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fno-gym-subscription-required-dad-trying-to-keep-toddler-triplets-away-from-fridge-has-good-workout-session%2F618289