ಹರಿಯಾಣ ಸಿಎಂ ಖಟ್ಟರ್, ಡಿಸಿಎಂ ದುಶ್ಯಂತ್ ಚೌಟಾಲಾ ಸೇರಿದಂತೆ ಬಿಜೆಪಿ ಹಾಗೂ ಜೆಜೆಪಿಯ ಎಲ್ಲಾ ನಾಯಕರನ್ನ ಹರಿಯಾಣದ ಖಾರಿದಾಬಾದ್ ಜನತೆ ಗ್ರಾಮಕ್ಕೆ ಬಾರದಂತೆ ಬಹಿಷ್ಕಾರ ಹೇರಿದ್ದಾರೆ.
ರೈತರ ಪ್ರತಿಭಟನೆಗೆ ಬೆಲೆ ಕೊಡದ ಬಿಜೆಪಿ ವಿರುದ್ಧ ಕೆಂಡಕಾರುತ್ತಿರುವ ಗ್ರಾಮದ ಜನತೆ ನಮ್ಮೂರಿಗೆ ಬಂದರೆ ಬೂಟುಗಳಿಂದ ಸ್ವಾಗತ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನ ವಿರೋಧಿಸಿ ಹರಿಯಾಣದ ರೈತರೂ ಸಹ ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಆಢಳಿತ ಪಕ್ಷದ ವಿರುದ್ಧ ಕೋಪಗೊಂಡಿರುವ ಗ್ರಾಮಸ್ಥರು ನಮ್ಮೂರಿಗೆ ಬಂದರೆ ನಿಮಗೆ ಪುಷ್ಪದ ಮಾಲೆಯಿಂದ ಸ್ವಾಗತ ಸಿಗೊಲ್ಲ. ಬದಲಾಗಿದೆ ಚಪ್ಪಲಿಯಿಂದ ಸಿಗುತ್ತೆ ಎಂದು ವಾರ್ನಿಂಗ್ ನೀಡಿದ್ದಾರೆ.
ಪಂಚಾಯಿತಿ ಮಟ್ಟದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಈ ನಿರ್ಣಯವನ್ನ ಕೈಗೊಳ್ಳಲಾಗಿದೆ. ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲೇ ಬಾಯ್ಕಾಟ್ ಬ್ಯಾನರ್ನ್ನೂ ಅಳವಡಿಸಲಾಗಿದೆ. ರೈತರ ಪರ ಮಾತನಾಡುವವರಿಗೆ ಮಾತ್ರ ಈ ಗ್ರಾಮಕ್ಕೆ ಪ್ರವೇಶ ಎಂದು ಬ್ಯಾನರ್ ಹಾಕಲಾಗಿದೆ.